ಅಭಿಪ್ರಾಯ / ಸಲಹೆಗಳು

ನಮ್ಮ ಕೊಪ್ಪಳ

ಎಪ್ರಿಲ್ 1, 1998 ರಂದು ಕೊಪ್ಪಳ ಜಿಲ್ಲೆಯು ಆಡಳಿತಾತ್ಮಕವಾಗಿ ಅಸ್ತಿತ್ವಕ್ಕೆ ಬಂದಿತು. ಕೊಪ್ಪಳವು ಇತಿಹಾಸದಲ್ಲಿ. ಚಕ್ರವರ್ತಿ ಅಶೋಕನ ಆಳ್ವಿಕೆಯ ಅವಧಿಯಲ್ಲಿ ಜೈನ ಧರ್ಮದ ಪ್ರಮುಖ ಕೇಂದ್ರವಾಗಿದ್ದರಿಂದ ಹಾಗೂ ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ (ಅನೆಗುಂದಿ) ಯಾಗಿದ್ದರಿಂದ ಇದು ಪ್ರಾಚೀನ ಮತ್ತು ಮಧ್ಯಕಾಲೀನ ಯುಗದಲ್ಲಿ ಒಂದು ಪ್ರಮುಖ ಸ್ಥಳವಾಗಿತ್ತು. ಜಿಲ್ಲಾ ಕೇಂದ್ರವು ಯುನೆಸ್ಕೊ ವಿಶ್ವ ಪರಂಪರೆಯ ತಾಣವಾದ ಹಂಪಿಯಿಂದ ಕೇವಲ 38 ಕಿ.ಮೀ ಅಂತರದಲ್ಲಿದೆ. ಕೊಪ್ಪಳವು ಬ್ರಿಟಿಷ್ರ ವಿರುದ್ದ ನಡೆದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಡರಗಿ ಭೀಮರಾವ್ ಮತ್ತು ಹಮ್ಮಗೀ ಕೆಂಚನಗೌಡರ ಬಲಿದಾನಕ್ಕೆ ಸಾಕ್ಷಿಯಾಗಿತ್ತು. ಹೈದರಾಬಾದ ನಿಜಾಮರ ಆಳ್ವಿಕೆಯಡಿಯಲ್ಲಿ ಹೈದರಬಾದ-ಕರ್ನಾಟಕ ಪ್ರದೇಶದ ಭಾಗವಾಗಿದ್ದ ಕೊಪ್ಪಳವು ದೇಶದ ಇತರ ಭಾಗಗಳಿಗಿಂತ ಒಂದು ವರ್ಷ ವಿಳಂಬವಾಗಿ 1948 ರ ಸಪ್ಟೆಂಬರ್ 18 ರಂದು ಸ್ವಾತಂತ್ರವನ್ನು ಪಡೆಯಿತು.

ಐತಿಹಾಸಿಕ ಮತ್ತು ಸಾಂಸ್ಕೃತಿಕ ಅಧ್ಬುತಗಳಲ್ಲಿ ಚಾಲುಕ್ಯ ಶೈಲಿಯ ವಾಸ್ತುಶಿಲ್ಪದ ಇಟಗಿಯ ಮಹಾದೇವ ದೇವಸ್ಥಾನ ಹೆಸರುವಾಸಿಯಾಗಿದೆ. ಕೊಪ್ಪಳದ ಮಾದೆನೂರ ದೇವಸ್ಥಾನ ಮಧ್ಯಕಾಲೀನ ಯುಗದ ಸುಂದರ ಕಂಚಿನ ವಿಗ್ರಹಗಳನ್ನು ಹೊಂದಿದೆ. ಟಿಪ್ಪುಸುಲ್ತಾನ ಆಳ್ವಿಕೆಯಲ್ಲಿ ಫ್ರೆಂಚ್ ಎಂಜಿನಿಯರಗಳ ಸಹಾಯದಿಂದ ಬಲಪಡಿಸಿದ ಆಕರ್ಷಕವಾದ ಕೋಟೆ ಕೊಪ್ಪಳ ನಗರದಲ್ಲಿದೆ.  ಆಧುನಿಕ ಅದ್ಭುತಕ್ಕೆ ಸಾಕ್ಷಿಯಾದ ತುಂಗಭದ್ರಾ ಅಣೆಕಟ್ಟು ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.  ಚಿತ್ತಾಕರ್ಷಕ ವಿಭಿನ್ನ ಶೈಲಿಯ ಮರದ ಕಟ್ಟಿಗೆಯಲ್ಲಿ ಬಿಡಿಸುವ ಪ್ರಾಚೀನ ಚಿತ್ರಕಲೆ ಕಿನ್ನಾಳ ಗ್ರಾಮದ ಚಿತ್ರಗಾರ ಕುಶಲಕರ್ಮಿಗಳಿಂದ ಜೀವಂತವಾಗಿದ್ದು, ವಿಜಯನಗರ ಸಾಮ್ರಾಜ್ಯದ ನೆನಪನ್ನು ಜೀವಂತವಾಗಿಟ್ಟಿದೆ. 

ಕೊಪ್ಪಳ ಜಿಲ್ಲೆ ಸುಮಾರು 14 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ಕೃಷಿ ಪ್ರಾಧಾನ್ಯತೆಯನ್ನು ಹೊಂದಿರುತ್ತದೆ. ಕರ್ನಾಟಕ ರಾಜ್ಯದಲ್ಲಿ ಕೊಪ್ಪಳವು ಉತ್ತಮ ಬೀಜ ಉತ್ಪಾದನಾ ಕೇಂದ್ರವಾಗಿದೆ.

ಇತ್ತೀಚಿನ ನವೀಕರಣ​ : 28-10-2020 01:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಪ್ಪಳ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080