ಅಭಿಪ್ರಾಯ / ಸಲಹೆಗಳು

ಮಕ್ಕಳ ಸಹಾಯವಾಣಿ

ಮಕ್ಕಳ ಸಹಾಯವಾಣಿಯು ಭಾರತದ ಮೊಟ್ಟಮೊದಲ 24 ಗಂಟೆಗಳ  ಉಚಿತ ಹಾಗು ತುರ್ತು ದೂರವಾಣಿ ಸೇವೆಯಾಗಿದ್ದು ಮಕ್ಕಳ ರಕ್ಷಣೆ ಮತ್ತು ಆರೈಕೆಗೆ ಸಂಬಂಧಿಸಿರುತ್ತದೆ. ಭಾರತ ಸರ್ಕಾರವು 1998-99 ರಲ್ಲಿ ಮೊಟ್ಟಮೊದಲು ಮಕ್ಕಳ ಸಹಾಯವಾಣಿಯನ್ನು ಜಾರಿಗೆ ತಂದಿರುತ್ತದೆ. ಸೇವೆಯು ಮಕ್ಕಳ ರಕ್ಷಣೆಗೆ  ಸಂಬಂಧಿಸಿದಂತೆ ತುರ್ತು ಸಹಾಯ ಕಲ್ಪಿಸುವುದು ಹಾಗು ನಂತರದಲ್ಲಿ ಮಕ್ಕಳ ಪುನರ್ ವಸತಿಗಾಗಿ ಕ್ರಮಕೈಗೊಳ್ಳುವುದಾಗಿರುತ್ತದೆ. ಯಾವುದೆ ಮಗು / ಸಂಬಂಧಿಸಿದ ಪೋಷಕರು ಅಥವಾ ಮಗುವಿನ ಪರವಾಗಿ ಯಾವುದೇ ವ್ಯಕ್ತಿಯು 1098 ಸಂಖ್ಯೆಗೆ ಕರೆ ಮಾಡಿ ಹಲಗು / ರಾತ್ರಿ 24 ಗಂಟೆ ಸೇವೆಯನ್ನು ಪಡೆದುಕೊಳ್ಳಬಹುದಾಗಿರುತ್ತದೆ.

ಮಕ್ಕಳ ಸಹಾಯವಾಣಿ ಯೋಜನೆಯು ಕೇಂದ್ರ ಸಚಿವಾಲಯ ಮಹಿಳಾ ಮತ್ತು ಮಕ್ಕಳ  ಅಭಿವೃದ್ದಿ ಸಚಿವಾಲಯಗಳಿಗೆಂದ ಬೆಂಬಲಿತವಾಗಿದ್ದು, ಎಲ್ಲಾ ರಾಜ್ಯ ಸರ್ಕಾರಗಳು, ಎನ್.ಜಿ. ಮತ್ತು ದ್ವಿಪಕ್ಷೀಯ / ಬಹು ಪಕ್ಷೀಯ ಸಂಸ್ಥೆಗಳು ಹಾಗು ಕಾರ್ಪೋರೇಟ್ ಸಂಸ್ಥೆಗಳೊಡನೆ ಸಂಪರ್ಕಹೊಂದಿರುತ್ತದೆ. 2013 ನೇ ಮಾರ್ಚಿ ತಿಂಗಳಿಗೆ ಅಂತ್ಯಗೊಂಡಂತೆ 27 ಮಿಲಿಯನ್ ಕರೆಗಳಿಗೆ ಮಕ್ಕಳ ಸಹಾಯವಾಣಿಯಿಂದ  ಸೇವೆಯನ್ನು ಒದಗಿಸಲಾಗಿದ್ದು, 291 ನಗರ, 30 ರಾಜ್ಯಗಳಲ್ಲಿ ಒಟ್ಟು 540 ಸಂಸ್ಥೆಗಳನ್ನು ಪಾಲುದಾರರನ್ನಾಗಿಸಿ ಭಾರತ ದೇಶಾಧ್ಯಂತ ಕಾರ್ಯ ನಿರ್ವಹಿಸುತ್ತಿರುತ್ತದೆ.

ದಿನಾಂಕ 28-05-1999 ರಂದು ಚೈಲ್ಡ್ ಲೈನ್ ಇಂಡಿಯಾ ಫೌಂಡೇಷನ್ (ಸಿಐಎಫ್) ಸ್ಥಾಪಿತಗೊಂಡಿದ್ದು, ಇದು ಕೇಂದ್ರ ಸಚಿವಾಲಯ ಮಹಿಳಾ ಮತ್ತು ಮಕ್ಕಳ  ಅಭಿವೃದ್ದಿ ಸಚಿವಾಲಯಗಳ ನೋಡಲ್ ಸಂಸ್ಥೆಯಾಗಿದ್ದು, ಮಕ್ಕಳ ಸಹಾಯವಾಣಿಯ ನಿರ್ವಹಣೆ, ಉಸ್ತುವಾರಿ, ಹಣಕಾಸು, ಸೇವಾವಿತರಣೆ, ತರಬೇತಿ, ಸಂಶೋದನೆ, ದಸ್ತಾವೇಜು ಹಾಗು ಮಕ್ಕಳ ಸಹಾಯವಾಣಿ 1098 ಗಾಗಿ ಸಂಪನ್ಮೂಲ ಉತ್ಪಾದನೆಯ ಕಾರ್ಯವನ್ನು ನಿರ್ವಹಿಸುತ್ತಿರುತ್ತದೆ ಹಾಗೂ ಸಿಐಎಫ್ ಮಕ್ಕಳ ಸಹಾಯವಾಣಿಯ ಬಗ್ಗೆ ಅರಿವು ಮೂಡಿಸುವ ರಾಷ್ಟ್ರೀಯ ಕೇಂದ್ರವಾಗಿದ್ದು, ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಸಮರ್ಥನೆ ಹಾಗೂ ತರಬೇತಿಯ ಸಮಸ್ಯೆಗಳ ಬಗ್ಗೆಯೂ ಕೂಡ ಕಾರ್ಯನಿರ್ವಹಿಸುತ್ತಿರುತ್ತದೆ.

ಮಕ್ಕಳ ಸಹಾಯವಾಣಿಯು 0-18 ವರ್ಷ ವಯಸ್ಸಿನ ಮಕ್ಕಳ ರಕ್ಷಣೆ ಹಾಗು ಹಕ್ಕುಗಳಿಗೆ ಸಂಬಂಧಿಸಿದಂತೆ ಕಾರ್ವನಿರ್ವಹಿಸುತ್ತಿದ್ದು, ವಿಶೇಷ ಗಮನವನ್ನು ಕೆಳಕಂಡ  ದುರ್ಬಲ ವಿಭಾಗಗಳ ಮಕ್ಕಳ ಮೇಲೆ ಹರಿಸಲಾಗುತ್ತಿರುತ್ತದೆ.

  • ಬೀದಿ ಮಕ್ಕಳು ಮತ್ತು ರಸ್ತೆಬದಿಯಲ್ಲಿ ವಾಸಿಸುವ ಮಕ್ಕಳು
  • ಸಂಘಟಿತ ಮತ್ತು ಅಸಂಘಟಿತ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಬಾಲ ಕಾರ್ಮಿಕರು
  • ಮನೆ ಕೆಲಸಕ್ಕೆ ಹೋಗುವ ಮಕ್ಕಳು, ವಿಶೇಷವಾಗಿ ಹೆಣ್ಣು ಮಕ್ಕಳು
  • ಕುಟುಂಬ, ಶಾಲೆ ಮತ್ತು ಸಂಸ್ಥೆಗಳಲ್ಲಿ ದೈಹಿಕ/ಲೈಂಗಿಕ/ಭಾವನಾತ್ಮಕ ನಿಂದನೆಗೆ ಒಳಪಟ್ಟ ಮಕ್ಕಳು
  • ಭಾವನಾತ್ಮಕ ಬೆಂಬಲ ಹಾಗು ಮಾರ್ಗದರ್ಶನದ ಅವಶ್ಯಕತೆ ಇರುವ ಮಕ್ಕಳು
  • ಲೈಂಗಿಕ ಕಾರ್ಯಕರ್ತೆಯರ ಮಕ್ಕಳು
  • ಮಾಂಸ ದಂಧಗೆ ಸಂಬಂಧಿಸಿದಂತೆ ನೊಂದ ಮಕ್ಕಳು
  • ಮಕ್ಕಳ ಕಳ್ಳಸಾಗಣೆಗೆ ಒಳಪಟ್ಟ ನೊಂದ ಮಕ್ಕಳು
  • ತಂದೆ, ತಾಯಿ ಅಥವಾ ಪೋಷಕರಿಂದ ತ್ಯಜಿಸಲ್ಪಟ್ಟ ಮಕ್ಕಳು
  • ಕಾಣೆಯಾದ ಮಕ್ಕಳು
  • ಓಡಿಹೋದ ಮಕ್ಕಳು
  • ಮಾದಕ ವಸ್ತುಗಳಿಗೆ ಸಂಬಂದಿಸಿದಂತೆ ನೊಂದ ಮಕ್ಕಳು
  • ಭಿನ್ನಾಭಿಪ್ರಾಯಕ್ಕೆ ಸಂಬಂಧಿಸಿದ ಮಕ್ಕಳು
  • ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳು
  • ಸಂಸ್ಥೆಗಳಲ್ಲಿನ ಮಕ್ಕಳು
  • ಬುದ್ಧಿಮಾಂದ್ಯ ಮಕ್ಕಳು
  • ಎಚ್ಐವಿ/ಏಡ್ಸ್ ಪೀಡಿತ ಮಕ್ಕಳು
  • ಸಂಘರ್ಷಕ್ಕೊಳಗಾದ ಮತ್ತು ದುರಂತಕ್ಕೆ ಒಳಗಾದ ಮಕ್ಕಳು
  • ದುರ್ಬರ ರಾಜಕೀಯದ ಪ್ರಭಾವಕ್ಕೆ ಒಳಪಟ್ಟ ನಿರಾಶ್ರಿತ ಮಕ್ಕಳು
  • ಬಿಕ್ಕಟ್ಟಿನಲ್ಲಿರುವ ಕುಟುಂಬಗಳ ಮಕ್ಕಳು

 ಮಕ್ಕಳ ಸಹಾಯವಾಣಿಯ ಮೂಲ ಉದ್ದೇಶಗಳು ಕೆಳಕಂಡಂತೆ ಇರುತ್ತವೆ:

 - 1098 ಗೆ ಕರೆಮಾಡುವ ಪ್ರತಿಯೊಂದು ಮಗುವಿನ ಸುರಕ್ಷತೆ ಹಾಗು ಆರೈಕೆಗೆ ಸಂಬಂಧಿಸಿದಂತೆ ಸೇವೆಯನ್ನು ಒದಗಿಸುವುದು.

ಮಕ್ಕಳ ಸುರಕ್ಷತೆ ಹಾಗು ಆರೈಕೆಗೆ ಸಂಬಂಧಿಸಿದಂತೆ, ಪುನರ್ ವಸತಿಯನ್ನು ಒದಗಿಸುವ ವಿವಿಧ ಸಂಸ್ಥೆಗಳ ಸಂಪರ್ಕ ವ್ಯವಸ್ಥೆಯನ್ನು ಒಂದೇ ವೇದಿಕೆಯಲ್ಲಿ ತರುವುದು.

ಮಕ್ಕಳ ಸ್ನೇಹಿ ವ್ಯವಸ್ಥೆಯನ್ನು ರಚಿಸುವ ಸಂಬಂಧ ಮೈತ್ರಿ ವ್ಯಸ್ಥೆಗಳಾದ ಪೊಲೀಸ್, ಆರೋಗ್ಯ, ಬಾಲ ನ್ಯಾಯ, ಸಂಚಾರಿ, ಕಾನೂನು ಬದ್ಧ, ಶಿಕ್ಷಣ, ಸಂಪರ್ಕ, ಮಾಧ್ಯ,, ರಾಜಕೀಯ ಮತ್ತು ಸಮುದಾಯ                   ವ್ಯವಸ್ಥೆಗಳೊಂದಿಗೆ ಒಟ್ಟಿಗೆ ಕಾರ್ಯ ನಿರ್ವಹಿಸುವುದು.

ಕಷ್ಟವಾದ ಪರಿಸ್ಥಿತಿಗಳಲ್ಲಿ ಮಕ್ಕಳಿಗೆ ಅವಶ್ಯಕವಾದ ಸಹಾಯವನ್ನು ಒದಗಿಸುವಲ್ಲಿ ಸಾರ್ವಜನಿಕರಿಗೆ ಅವಕಾಶವನ್ನು ಕಲ್ಪಿಸುವುದು.

 

ಇತ್ತೀಚಿನ ನವೀಕರಣ​ : 11-10-2020 04:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಪ್ಪಳ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080