ಅಭಿಪ್ರಾಯ / ಸಲಹೆಗಳು

ಸೈಬರ ಅಪರಾಧ

ಸೈಬರ್ ಅಪರಾಧ

ಸೈಬರ್ ಕ್ರೈಂ:

ಸೈಬರ್ ಕ್ರೈಂ ಎಂದರೆ ಅಂತರ್ಜಾಲ ಮತ್ತು ಗಣಕ ಯಂತ್ರ ಬಳಸಿ ಮಾಡುವ ಅಪರಾಧಗಳು. ಅಪರಾಧಿಗಳು ಅಂತರ್ಜಾಲಸಂಪರ್ಕಪಡೆದು ಇತರರಿಗೆ ಗಣಕ ಯಂತ್ರ ಬಳಕೆಯನ್ನು ನಿರ್ಭಂಧಿಸುವುದು ಮತ್ತು ವೈರಸ್ ಹರಡಿ ಇಡೀ ಸಂಪರ್ಕವನ್ನು ನಾಶಪಡಿಸುವುದು, ದುರುದ್ದೇಶವುಳ್ಳ ತಂತ್ರಾಂಶಗಳನ್ನು ಉಪಯೋಗಿಸಿ ಇನ್ನೊಬ್ಬರ ಕ್ರೆಡಿಟ್ ಕಾರ್ಡ, ಬ್ಯಾಂಕ್ ಖಾತೆಗಳ ವಿವರಗಳನ್ನು ನಕಲಿಕರಿಸಿಕೊಳ್ಳುವುದು ಮತ್ತು ಇನ್ನೊಬ್ಬರ ಬಗ್ಗೆ ತಪ್ಪು ಭಾವನೆ ಬರುವಂತೆ ಮಾಡುವುದು, ಬೆದರಿಕೆಯ ಮೂಲಕ ಭಯೋತ್ಪಾದನೆ ಉಂಟುಮಾಡುವುದು.

 

ವಿವಿಧ ರೀತಿಯ ಸೈಬರ್ ಅಪರಾಧಗಳು:

ಸ್ಪ್ಯಾಮ್:

ಇತರರ ಇ-ಮೇಲ್ಗಳಿಗೆ ಹಣ ಸಂಪಾದನೆ ಮಾಡುವ ಆಸೆಯಿಂದ ಹೊಸಮಾದರಿಯಲ್ಲಿ ಇ-ಮೇಲ್  ಮುಖಾಂತರ  ಆಕರ್ಷಕ  ಚಿತ್ರಗಳನ್ನು,  ಬಹುಮಾನದ  ಆಸೆಯನ್ನು ತೋರಿಸುವಂತಹ ಸಂದೇಶವನ್ನು ಕಳುಹಿಸುತ್ತಾರೆ. ಈ ರೀತಿ ಬಂದ ಸಂದೇಶವನ್ನು ತೆರೆದಲ್ಲಿ ಗಣಕಯಂತ್ರದಲ್ಲಿ ವೈರಸ್ ಸ್ಥಾಪಿತವಾಗಿ ನಂತರ ಕಡತಗಳನ್ನು ಸ್ವಯಂಚಾಲಿತವಾಗಿ ಮುಚ್ಚುತ್ತದೆ. ಇದನ್ನು ಪುನ: ತೆರೆಯಬೇಕಾದರೆ, ಹಣ ಪಾವತಿಸುವಂತೆ ನಿರ್ದೇಶಿಸುತ್ತದೆ.

ಮೋಸ:

ಗಣಕಯಂತ್ರಗಳನ್ನು ಉಪಯೋಗಿಸಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಇನ್ನೊಬ್ಬರ ವೈಯಕ್ತಿಕ ದಾಖಲೆಗಳ ಮಾಹಿತಿಯಾದ ಅಂಕಿಚಿಹ್ನೆ, ಗೌಪ್ಯ ಪದ, ಅನನ್ಯ ಐಡೆಂಟಿಟಿ ನಂಬರ್ಗಳನ್ನು, ಅಪ್ರಾಮಾಣಿಕವಾಗಿ ಬಳಸಿಕೊಂಡು ಹಾನಿಯನ್ನುಂಟುಮಾಡುವುದು.

ಅಶ್ಲೀಲ ಅಥವಾ ಕಾನೂನುಬಾಹಿರ ಮಾಹಿತಿ:

ಯಾವುದೇ ವ್ಯಕ್ತಿಯ ಘನತೆ/ಗೌರವಕ್ಕೆ/ಪ್ರಸಿದ್ದಿ/ಮಾನಕ್ಕೆ ಹಾನಿಯನ್ನುಂಟು ಮಾಡುವಂತಹ ಚಿತ್ರ, ಪದ, ಲೇಖನಗಳನ್ನು ಅಂತರ್ಜಾಲದಲ್ಲಿ ಬಿತ್ತರಿಸುವುದು.

ದೌರ್ಜನ್ಯ:

ವೈಯಕ್ತಿಕ ದ್ವೇಷದಿಂದ ಇನ್ನೊಬ್ಬ ವ್ಯಕ್ತಿಯನ್ನು ಲಿಂಗ, ವರ್ಣ, ಜಾತಿ, ಮತ್ತು ರಾಷ್ಟ್ರೀಯತೆಯನ್ನು ನಿಂದಿಸಿ ಅಂತರ್ಜಾಲದಲ್ಲಿ ಅಂದರೆ ಚಾಟ್ ರೂಂ, ಗುಂಪು ಸಂದೇಶಗಳನ್ನು ರವಾನಿಸುವ ಮೂಲಕ ನಿರ್ದಿಷ್ಟ ವ್ಯಕ್ತಿಗೆ ಮಾನಸಿಕ ಹಿಂಸೆಯನ್ನು ನೀಡುವುದು.

ಕಾನೂನುಬಾಹಿರ ಔಷಧ ಮತ್ತು ಮಾದಕ ದ್ರವ್ಯ ವ್ಯಾಪಾರ ಮತ್ತು ಮಾರಾಟ:

ಕಾನೂನುಬಾಹಿರ ಔಷಧ ಮತ್ತು ಮಾದಕ ದ್ರವ್ಯಗಳನ್ನು ಅಂತಜರ್ಾಲವನ್ನು ಉಪಯೋಗಿಸಿ ಅಂದರೆ, ಇ-ಮೇಲ್,  ಚಾಟ್ ರೂಂ,  ಜಾಹಿರಾತು  ಇತ್ಯಾದಿಗಳ ಮೂಲಕ ದೇಶ ಮತ್ತು ವಿದೇಶಗಳಲ್ಲಿ ವ್ಯಾಪಾರ ಮತ್ತು ಮಾರಾಟ ಮಾಡುವುದು. ಇದರಿಂದಾಗಿ ದೇಶದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.

ಸೈಬರ್ ಭಯೋತ್ಪಾದನೆ:

ಎದುರು ಕಾಣಿಸಿಕೊಳ್ಳಲು ಇಚ್ಛಿಸದ ಗೂಡಾಚಾರ ಸಂಘಟನೆಗಳಿಂದ ಅಥವಾ ಪ್ರಾದೇಶಿಕವಾದಿ ಗುಂಪುಗಳಿಂದ ಪೂರ್ವ ನಿರ್ಧರಿತ, ರಾಜಕೀಯವಾಗಿ ಪ್ರೇರಿತ ದಾಳಿಗಳಿಂದ ಗಣಕ ಯಂತ್ರ ವ್ಯವಸ್ಥೆಗೆ, ಗಣಕ ತಂತ್ರಾಂಶಗಳಿಗೆ ಮತ್ತು ಮಾಹಿತಿಗಳಿಗೆ ಹಾನಿಯುಂಟು ಮಾಡುವುದು.

ಡೇಟಾ ಡಿಡ್ಲಿಂಗ್:

ಮೂಲ ಮಾಹಿತಿಯನ್ನು ಮಾಲಿಕನ ಅನುಮತಿ ಇಲ್ಲದೆ ತಮಗೆ ಬೇಕಾದಂತೆ ಬದಲಿಸಿಕೊಂಡು, ಕಾರ್ಯ ಮುಗಿದ ನಂತರ ಯಥಾ ಸ್ಥಿತಿಗೆ ಬದಲಿಸುವುದು.

ಸಲಾಮಿ ಅಟ್ಯಾಕ್:

ಇದು ಒಂದು ರೀತಿಯ ಆರ್ಥಿಕ ಅಪರಾಧವಾಗಿದ್ದು, ಮಾಲೀಕನ ಗಮನಕ್ಕೆ ಬರದಂತೆ ಸಣ್ಣ ಬದಲಾವಣೆಗಳನ್ನು ಮಾಡಿ ಮೋಸ ಮಾಡುವುದು ಉದಾ: ಬ್ಯಾಂಕಿನ ಸರ್ವರಗಳಿಗೆ ಕಾನೂನು ಬಾಹಿರ ತಂತ್ರಾಂಶವನ್ನು ಹಾಕಿ ಪ್ರತಿಯೊಬ್ಬ ಖಾತೆದಾರನ ಖಾತೆಯಿಂದ ಸಣ್ಣ ಪ್ರಮಾಣದ ಮೊತ್ತವನ್ನು ಕಡಿತ ಮಾಡಿ ಹಣಗಳಿಸುವುದು.

ಅಂತರ್ಜಾಲ ಸಮಯ ಕಳವು:

ಬೇರೆಯವರ ಹಣ ಸಂದಾಯ ಮಾಡಿ ಬಳಸುವ ಅಂತರ್ಜಾಲವನ್ನು ಅನುಮತಿ ಇಲ್ಲದೆ ಬಳಸಿ ಕೊಳ್ಳುವುದು.

ಲಾಜಿಕ್ ಬಾಂಬ್:

ಇದು ಒಂದು ಸಂದರ್ಭ ಆಧರಿತ ತಂತ್ರಾಂಶವಾಗಿದ್ದು. ಒಂದು ನಿಶ್ಚಿತ ಸಮಯದಲ್ಲಿ ಘಟನೆ ಸಂಭವಿಸುವಂತೆ ಮಾಡಿ ಇಡೀ ಗಣಕ ವ್ಯವಸ್ಥೆಗೆ ಹಾನಿಯುಂಟು ಮಾಡುವುದು.

ವೈರಸ್ ಅಟ್ಯಾಕ್:

ವೈರಸ್ ಒಂದು ತಂತ್ರಾಶವಾಗಿದ್ದು, ಗಣಕ ಯಂತ್ರದಲ್ಲಿದ್ದ ಕಡತಗಳನ್ನು ಸ್ವಯಂಚಾಲಿತವಾಗಿ ಬದಲಾಯಿಸುವುದು, ನಾಶಪಡಿಸುವುದು, ಅದೇ ರೀತಿಯ ಇನ್ನೊಂದು ಪ್ರತಿಯನ್ನು ಸೃಷ್ಟಿಸುವುದು ಮತ್ತು ಅಂತರ್ಜಾಲದ ಮೂಲಕ ಹರಿದಾಡಿ ಬೇರೆ ಬೇರೆ ಗಣಕ ಯಂತ್ರಗಳಿಗೆ ಹಾನಿಯನ್ನುಂಟು ಮಾಡುವುದು.

ಟ್ರೊಜನ್ ಅಟ್ಯಾಕ್:

ಸಹಜ ಪ್ರವೃತ್ತಿ ಹೊಂದಿರುವ ಅಪ್ರಾಮಾಣಿಕ ತಂತ್ರಾಂಶವಾಗಿದ್ದು ಸಹಜ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಕಾಣಿಸಿಕೊಂಡು ಗಣಕ ವ್ಯವಸ್ಥೆಗೆ ಹಾನಿಯನ್ನುಂಟು ಮಾಡುವುದು.

ಡೇನಿಯಲ್ ಆಫ್ ಸರ್ವಿಸ್ ಅಟ್ಯಾಕ್:

ಒಂದು ಸರ್ವರ್ ಅಥವಾ ಗಣಕ ಯಂತ್ರವು ಕಾರ್ಯನಿರ್ವಹಿಸುವ ಸಾಮಥ್ರ್ಯಕ್ಕಿಂತ ಹೆಚ್ಚಿನ ಕೋರಿಕೆಯನ್ನು ನೀಡುವಂತೆ ಮಾಡಿ ಹಾನಿಯನ್ನುಂಟು ಮಾಡುವುದು.

ಪೊರ್ನೊಗ್ರಾಫಿ:

ಅಂತರ್ಜಾಲದಲ್ಲಿ ಅಶ್ಲೀಲ ಚಿತ್ರಗಳನ್ನು, ಸಾಹಿತ್ಯ ಮತ್ತು ಚಲನಚಿತ್ರಗಳನ್ನು ಅಪ್ಲೋಡ್ ಮಾಡುವುದು ಹಾಗೂ ಡೌನ್ಲೋಡ್ ಮಾಡುವುದು.

ಇ-ಮೇಲ್ ಸ್ಪೋಪಿಂಗ್:

ಮೋಸ ಮಾಡುವ ಉದ್ದೇಶದಿಂದ, ಸಂದೇಶವನ್ನು ಕಳುಹಿಸುವವರ ನಿಜವಾದ ವಿಳಾಸ ಮತ್ತು ಸ್ಥಳವನ್ನು ಮರೆಮಾಚಿ ಯಾರೋ ಒಬ್ಬರು ಎಲ್ಲಿಂದಲೋ ಕಳುಹಿಸಿದಂತೆ ಮತ್ತು ಆ ಸಂದೇಶಕ್ಕೆ ಉತ್ತರ ನೀಡುವಂತೆ ಮಾಡುವುದು.

ಇನ್ಟೆಲೆಕ್ಚಲ್ ಪ್ರೋಪರ್ಟಿ ಕ್ರೈಂ:

ಅನುಮತಿ ಇಲ್ಲದೆ (ಕಾನೂನು ಬಾಹಿರವಾಗಿ) ತಂತ್ರಾಂಶದ ನಕಲು ಪ್ರತಿಯನ್ನು ತಯಾರಿಸುವುದು, ಬೇರೊಬ್ಬರ ವ್ಯಾಪಾರ ಮುದ್ರೆ ಅಥವಾ ಸರಕು ಮುದ್ರೆಯನ್ನು ಬಳಸುವುದು

ಇತ್ತೀಚಿನ ನವೀಕರಣ​ : 17-10-2020 01:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಪ್ಪಳ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080