ಅಭಿಪ್ರಾಯ / ಸಲಹೆಗಳು

ಇಸ್ಪೇಟ್ ಜೂಜಾಟ ದಾಳಿ.

ದಿನಾಂಕ:- 08-02-2021 ರಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಹೇರೂರ್  ಸೀಮಾದಲ್ಲಿ ರಿಲೈನ್ಸ ಟವರ್ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಸುಮಾರು 8 ಜನ ಆರೋಪಿತರು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಆರ್.ಎಸ್. ಉಜ್ಜನಕೊಪ್ಪಳ ಡಿ.ಎಸ್.ಪಿ. ಗಂಗಾವತಿ ಉಪವಿಭಾಗರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತರಿಂದ ನಗದು ಹಣ 12,220=00, ರೂ ಹಾಗೂ 52 ಇಸ್ಪೇಟ್ ಎಲೆಗಳು ಹಾಗೂ ಒಂದು ಹಳೆಯ ಬರ್ಕನ್ನು ಜಪ್ತಿ ಮಾಡಿಕೊಂಡು ಈ ಬಗ್ಗೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.

 

ಅಕ್ರಮ ಮದ್ಯ ಮಾರಾಟ ದಾಳಿ.

ದಿನಾಂಕ: 08-02-2021  ರಂದು ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಾವಿನ ಇಟಗಿ ಗ್ರಾಮದ ಶ್ರೀ ದುರುಗಮ್ಮ ದೇವರ ಗುಡಿಯ ಮುಂದುಗಡೆ  ಸಾರ್ವಜನಿಕ ಸ್ಥಳದಲ್ಲಿ ಆರೋಪಿ ತಾಕರೇಪ್ಪ ತಂದೆ ಸೋಮಲೇಪ್ಪ ಸಾ: ಮಾವಿನ ಇಟಗಿ ಇವನು ಕಳ್ಳಭಟ್ಟಿ ಸರಾಯಿಯನ್ನು ಸರ್ಕಾರ ನಿಷೇಧಿಸಿದರೂ ಸಹಿತ ಇವನು ತನ್ನ ಲಾಭಕ್ಕೋಸ್ಕರ ಮಾನವ ಜೀವಕ್ಕೆ ಅಪಾಯಕಾರಿಯಾಗುವಂತ ಅಪಾಯಕಾರಿ ರಸಾಯನಿಕ ವಸ್ತುಗಳನ್ನು ಮಿಶ್ರಣ ಮಾಡಿ ಕಳ್ಳಭಟ್ಟಿ ಸರಾಯಿ ತಯಾರಿಸುತ್ತಿದ್ದಾಗ ಶ್ರೀ ಅಶೋಕ ಬೇವೂರು ಪಿ.ಎಸ್.ಐ. ಹನುಮಸಾಗರ ಪೊಲೀಸ್  ಠಾಣೆರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ದಾಳಿ ಮಾಡಿ ಮುದ್ದೇಮಾಲುಗಳನ್ನು ಜಪ್ತಿ ಮಾಡಿ ಆರೋಪಿತನ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಮಟಕಾ ಜೂಜಾಟ ದಾಳಿ.

ದಿನಾಂಕ: 08-02-2021 ರಂದು ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಹಿರೇಬನ್ನಿಗೋಳ ಗ್ರಾಮದ ಶಿವನಮ್ಮ ಗುಡಿಯ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಶರಣಪ್ಪ ತಂದೆ ಶೇಖಪ್ಪ ಗದ್ದಿ ವಯ:38 ವರ್ಷ, ಜಾತಿ: ಲಿಂಗಾಯತ, ಉ : ಒಕ್ಕಲುತನ, ಸಾ: ಹಿರೇಬನ್ನಿಗೋಳ.ತಾ: ಕುಷ್ಟಗಿ ಇತನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ತಿಮ್ಮಣ್ಣ ಪಿ.ಎಸ್.ಐ. ಕುಷ್ಟಗಿ ಪೊಲೀಸ್ ಠಾಣೆರವರು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೋಗಿ ದಾಳಿ ಮಾಡಿ ನಗದು ಹಣ 1150-00 ರೂ. ಮಟ್ಕಾ ಜೂಜಾಟದ ಸಾಮಗ್ರಿಗಳನ್ನು ಜಪ್ತಿ ಮಾಡಿಕೊಂಡು ಹಾಗೂ ಮಟ್ಕಾ ಪಟ್ಟಿ ಪಡೆಯುತ್ತಿದ್ದ ಮಹೇಶ ಬನ್ನಿಕಟ್ಟೆ ಸಾ: ಕೋನಸಾಗರ ತಾ: ಯಲಬುರ್ಗಾ ಇವರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 09-02-2021 01:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಪ್ಪಳ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080