ಅಭಿಪ್ರಾಯ / ಸಲಹೆಗಳು

ಇಸ್ಪೇಟ್ ಜೂಜಾಟ ದಾಳಿ 1,69,000/- ಜಪ್ತಿ.

ದಿನಾಂಕ :19-10-2020 ಶ್ರೀ ಆರ್.ಎಸ್. ಉಜ್ಜನಕೊಪ್ಪ ಡಿ.ಎಸ್.ಪಿ. ಗಂಗಾವತಿ ರವರು ಹಾಗೂ ತಮ್ಮ ಸಂಗಡ ಕುಷ್ಟಗಿ ಸಿ.ಪಿ.ಐ ರವರಾದ  ಶ್ರೀ ನಿಂಗಪ್ಪ ಆರ್ ಎಸ್ ಮತ್ತು ಕುಷ್ಟಗಿ ಠಾಣೆಯ ಪಿ.ಎಸ್.ಐ ರವರಾದ ಶ್ರೀ ಚಿತ್ತರಂಜನ್ ಡಿ ಹಾಗೂ ಅವರ ಸಿಬ್ಬಂದಿಯವರು ಹಾಗೂ ತಾವರಗೇರಾ ಪೊಲೀಸ್ ಠಾಣೆ ಪಿ.ಎಸ್.ಐ ರವರಾದ ಕು.ಗೀತಾಂಜಲಿ ಶಿಂಧೇ ಹಾಗೂ ಅವರ ಸಿಬ್ಬಂದಿಯವರೊಂದಿಗೆ ಪಂಚರ ಸಮ್ಮುಖದಲ್ಲಿ ತಾವರಗೇರಾ ಠಾಣಾ ವ್ಯಾಪ್ತಿಯಲ್ಲಿನ ಕೆ ಬೆಂಚಮಟ್ಟಿ ಸೀಮಾಂತರದಲ್ಲಿ ಗುಡ್ಡದ ಹಳ್ಳದ ನಾಲಾದ ಸಾರ್ವಜನಿಕ ಸ್ಥಳದಲ್ಲಿ  ಕೋವಿಡ್-19 ಇದ್ದರೂ ಸಹ ಸಾಮಾಜಿಕ ಅಂತರವನ್ನು ಕಾಪಾಡದೇ ದುಂಡಾಗಿ ಕುಳಿತುಕೊಂಡು ಅಕ್ರಮವಾಗಿ ಇಸ್ಟಟ್ ಎಲೆಗಳ ಸಹಾಯದಿಂದ ಅಂದರ ಬಾಹರ್ ಎನ್ನುವ ಇಸ್ಪೇಟ್ ಜೂಜಾಟ ಆಡುವ ಕಾಲಕ್ಕೆ ಹೋಗಿ ದಾಳಿ ಮಾಡಿ ಇಸ್ಪಟ್ ಜೂಜಾಟದ ನಗದು ಹಣ 1,08,850=00 ರೂ ಗಳನ್ನು ಹಾಗೂ 52 ಇಸ್ಪಟ್ ಎಲೆ, 1 ಪ್ಲಾಸ್ಟಿಕ್ ಬರಕಾ ಹಾಗೂ 2 ಸ್ವೀಪ್ಟ್  ಡಿಜಾಯರ್ ಕಾರ್ ಮತ್ತು 13 ಮೋಟಾರ್ ಸೈಕಲಗಳನ್ನು ವಶಪಡಿಸಿಕೊಂಡು ಹಾಗೂ ಜೂಜಾಟದಲ್ಲಿ ತೊಡಿಗಿದ್ದ  07 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ದಿನಾಂಕ: 19-10-2020 ರಂದು ಬಸಪ್ಪ ಸಜ್ಜನ ಎ.ಎಸ್.ಐ. ಅಳವಂಡಿ ಪೊಲೀಸ್ ಠಾಣೆ ರವರು ಠಾಣಾ ವ್ಯಾಪ್ತಿಯ ಹಿರೇಸಿಂದೋಗಿ ಗ್ರಾಮದ 500 ಆಶ್ರಯ ಕಾಲೋನಿಯ ಅಂಬೇಡ್ಕರ ಸಮುದಾಯ ಭವನ ಮುಂದೆ ಸಾರ್ವಜನಿಕ ಸ್ಥಳದಲ್ಲಿ 07 ಆರೋಪಿತರು ಹಣವನ್ನು ಕಟ್ಟಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟವನ್ನು ಆಡುತ್ತಿರುವಾಗ ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ನಗದು ಹಣ ರೂ. 60,150=00, 52 ಇಸ್ಪೇಟ್ ಎಲಗಳು, ಹಾಗೂ ಒಂದು ಪ್ಲಾಸ್ಟಿಕ್ ಬರಕಾ ಜಪ್ತ ಮಾಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 23-10-2020 02:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಪ್ಪಳ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080