ಅಭಿಪ್ರಾಯ / ಸಲಹೆಗಳು

ಇಸ್ಪೇಟ್ ಜೂಜಾಟ ದಾಳಿ.

ದಿನಾಂಕ: 03-02-2021 ರಂದು ಯಲಬುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯ ಮುಧೋಳ ಸೀಮಾದ ಕಗ್ಗಲ್ ಬಸವಣ್ಣ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸುಮಾರು 8 ಜನ ಆರೋಪಿತರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಹನುಮಂತಪ್ಪ ಪಿ.ಎಸ್.ಐ. ಯಲಬುರ್ಗಾ ಪೊಲೀಸ್ ಠಾಣೆರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ದಾಳಿ ಮಾಡಿ ಜೂಜಾಟದಲ್ಲಿ ನಿರತರಾಗಿದ್ದ 08 ಜನರನ್ನು ಹಿಡಿದು ಹಾಗೂ ಅವರಿಂದ ಜೂಜಾಟಕ್ಕೆ ಬಳಿಸಿದ ನಗದು ಹಣ 9,830/-ರೂ,ಗಳು, 52 ಇಸ್ಪೀಟ ಎಲೆಗಳು ಹಾಗೂ ಒಂದು ಪ್ಲಾಸ್ಟೀಕ್ ಬರ್ಕಾ ಇವುಗಳನ್ನು ಜಪ್ತಿ ಮಾಡಿಕೊಂಡು ಈ ಬಗ್ಗೆ ಪ್ರರಕಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಮಟ್ಕಾ ಜೂಜಾಟ ದಾಳಿ.

ದಿನಾಂಕ 03.02.2021 ರಂದು ಬೇವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ಗ್ರಾಮದ ಮೇನ್ ಬಜಾರದಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿ ಹಂಪಯ್ಯ ಕುದರಿಮೋಗಿ ಸಾ: ಮಂಗಳೂರು ಇತನು ಜನರಿಂದ ಹಣ ಪಡೆದುಕೊಂಡು ಓಸಿ ಚೀಟಿಗಳನ್ನು ಬರೆದು ಕೊಡುತ್ತಿದ್ದಾಗ ಶ್ರೀ ಶೀಲಾ ಎಂ. ಪಿ.ಎಸ್.ಐ. ರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತನಿಂದ ನಗದು ಹಣ 2,230=00 ರೂಪಾಯಿ, ಒಂದು ಓ/ಸಿ ಪಟ್ಟಿಯನ್ನು ಮತ್ತು ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ದಿನಾಂಕ: 03-02-2021 ರಂದು ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಲಿಹೈದರ ಗ್ರಾಮದ ಶ್ರೀ ನಗರೇಶ್ವರ್ ಗುಡಿಯ ಹಿಂದೆ ಸಾರ್ವಜನಿಕರ ಸ್ಥಳದಲ್ಲಿ ಆರೋಪಿತನಾದ ಶರಣಪ್ಪ ತಂದೆ ಶಿವಪ್ಪ ರಾಮದಿನ್ನಿ ಸಾ: ಹುಲಿಹೈದರ ಈತನು ಸಾರ್ವಜನಿಕರಿಗೆ ಕರೆದು ಹಣ ಪಡೆದುಕೊಂಡು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಶ್ರೀ ಕಾಸಿಂಸಾಬ ಪಿ.ಎಸ್.ಐ. ಕನಕಗಿರಿ ಪೊಲೀಸ್ ಠಾಣೆ ರವರು ಇಬ್ಬರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿನಿಗೆ ಹಿಡಿದುಕೊಂಡು ಮಟ್ಕಾ ನಂಬರ್ ಬರೆದ ಪಟ್ಟಿ, ಒಂದು ಬಾಲ್ ಪೆನ್ನು ಮತ್ತು ನಗರು ರೂ.790/- ಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಅಕ್ರಮ ಮದ್ಯ ಮಾರಾಟ ದಾಳಿ.

ದಿನಾಂಕ: 03-02-2021 ರಂದು ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಕುಮುಟಾ ಗ್ರಾಮದ ದೊಡ್ಡ ಯಮನೂರಪ್ಪ ಇವರ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಪರಸಪ್ಪ ತಂದೆ ಮಡಿನಾಳಪ್ಪ ಮದಿನಾಳ ಸಾ: ಹಳೇ ಕುಮಟಾ ಇತನು ಗ್ರಾಮದ ದೊಡ್ಡ ಯಮನೂರಪ್ಪ ಇವರ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿರುವ ಸಮಯದಲ್ಲಿ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದ್ದು, ದಾಳಿ ಕಾಲಕ್ಕೆ ಆರೋಪಿತನು ಓಡಿ ಹೋಗಿದ್ದು ಆತನು ಸ್ಥಳದಲ್ಲಿ ಬಿಟ್ಟು ಹೋಗಿರುವ ಚೀಲದಲ್ಲಿ 35.13 ರೂ ಮೌಲ್ಯದ 90 ಎಂ.ಎಲ್ ನ 75 ಓರಿಜಿನಲ್ ಚಾಯ್ಸ್ ಟೆಟ್ರಾ ಪಾಕೆಟ್ ಗಳು ಇದ್ದು ಅವುಗಳ  ಒಟ್ಟು ಕಿಮ್ಮತ್ತು 2634.75 ರೂ.ಮೌಲ್ಯದ ಟೆಟ್ರಾ ಪ್ಯಾಕೆಟಗಳನ್ನು ಜಪ್ತ ಪಡಿಸಿಕೊಂಡಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 09-02-2021 01:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಪ್ಪಳ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080