ಅಭಿಪ್ರಾಯ / ಸಲಹೆಗಳು

ಇಸ್ಪೇಟ್‌ ಜೂಜಾಟ ದಾಳಿ.

ದಿನಾಂಕ :  15-06-2022 ರಂದು ಕುಷ್ಟಗಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕುಷ್ಟಗಿ ಪಟ್ಟಣದ ಎಸ್.ಬಿ ಪೆಟ್ರೋಲ್ ಬಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 5 ಜನ ಆರೋಪಿತರು ಅಂದರ ಬಾಹರ ಎಂಬ ಇಸ್ಪಿಟ್ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ತಿಮ್ಮಣ್ಣ ಪಿ.ಎಸ್.ಐ(ಕಾ&ಸು) ಕುಷ್ಟಗಿ ಪೊಲೀಸ್ ಠಾಣೆ ರವರು ಸಿಬ್ಬಂದಿಯರೊಂದಿಗೆ ಹೋಗಿ ದಾಳಿ ಮಾಡಿ ನಗದು ಹಣ 3010=00 ರೂ ಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.

ಮಟ್ಕಾ ಜೂಜಾಟ ದಾಳಿ.

ದಿನಾಂಕ: 15-06-2022 ರಂದು ಕಾರಟಗಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕಾರಟಗಿಯ ಸಿದ್ದಾಪೂರ ಗ್ರಾಮದ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಆರೋಪಿ ಈಶಪ್ಪ ತಂದೆ ರಾಮಪ್ಪ ಕೊಪ್ಪಳ ಸಾ: ಸಿದ್ದಾಪೂರ ಇತನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ.ವೀರಭದ್ರಯ್ಯ. ಎಸ್. ಹಿರೇಮಠ ಪಿ.ಐ ಕಾರಟಗಿ ಪೊಲೀಸ್ ಠಾಣೆರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ನಗದು ಹಣ ರೂ. 350=00 ಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ದಾಳಿ.  

ದಿನಾಂಕ: 15-06-2022 ರಂದು ಕೂಕನೂರು ಪೊಲೀಸ ಠಾಣಾ ವ್ಯಾಪ್ತಿಯ ಭಾನಾಪುರ ಗ್ರಾಮದಲ್ಲಿಯ ಭಾನಾಪುರ-ಯಲಬುರ್ಗಾ NH-367 ರಸ್ತೆಯ ಬದಿಯಲ್ಲಿ ಸಾಗರ ನ್ಯೂ ಡಾಬಾದ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಹೋಗಿ ದಾಳಿ ಮಾಡಲು  ಶಿವಕುಮಾರ ತಂದೆ ಬಸಯ್ಯ ಹಿರೇಮಠ  ವಯಾ: 22 ವರ್ಷ ಜಾ:ಜಂಗಮ ಉ: ಹೊಟೇಲ್ ವ್ಯಾಪಾರ ಸಾ: ಭಾನಾಪುರ ಇತನು ಭಾನಾಪುರ ಗ್ರಾಮದಲ್ಲಿಯ ಭಾನಾಪುರ-ಯಲಬುರ್ಗಾ NH-367 ರಸ್ತೆಯ ಬದಿಯಲ್ಲಿ ಸಾಗರ ನ್ಯೂ ಡಾಬಾದ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿರುವಾಗ ಡಾಕೇಶ ಪಿ.ಎಸ್. ಐ ಕುಕನೂರ ಠಾಣೆ ರವರು ದಾಳಿ ಮಾಡಿ ಆರೋಪಿಯನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 16-06-2022 04:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಪ್ಪಳ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080