ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ

ದಿನಾಂಕ:05-04-2022 ರಂದು ಬೇವೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಗಾಣದಾಳ ಗ್ರಾಮದ ಸರ್ಕಾರಿ ಆಸ್ಪತ್ರೆಯ ಸಾರ್ವಜನಿಕರ ಸ್ಥಳದಲ್ಲಿ ತನ್ನ ಹತ್ತಿರ ಆರೋಪಿ ಯಲ್ಲಪ್ಪ ಚಿಲಕಪ್ಪ ವಡ್ಡರ ಇತನು ಯಾವುದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಮದ್ಯದ ಟೆಟ್ರಾ ಪಾಕೀಟ್ ಗಳನ್ನು ಇಟ್ಟುಕೊಂಡು ಅನಧೀಕೃತವಾಗಿ ಮಾರಾಟ ಮಾಡುತ್ತಿದ್ದಾಗ ಶೀಲಾ ಎಂ. ಪಿ.ಎಸ್.ಐ. ಬೇವೂರು ಠಾಣೆರವರು ಹೋಗಿ ದಾಳಿ ಮಾಡಿ ರೂ. 1194=42 ರೂ.ಗಳು ಬೆಲೆಬಾಳುವ ಮದ್ಯದ  ಟೆಟ್ರಾ ಪಾಕೀಟ್ ಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ದಿನಾಂಕ:05-04-2022 ರಂದು ಯಲಬುರ್ಗಾ ಪೊಲೀಸ್‌ ಠಾಣಾ ವ್ಯಾಪ್ತಿಯ ಹುಲೆಗುಡ್ಡ ಗ್ರಾಮದ ಪ್ರಾಥಮಿಕ ಶಾಲೆ ಹತ್ತಿರದ ಹೊಟೇಲ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಶರಣಪ್ಪ ತಂದೆ ಬಸನಗೌಡ ಸಾ: ಹುಲೆಗುಡ್ಡ ಇತನು ಮಧ್ಯಸಾರ ಮಾರಾಟ ಮಾಡಲು ಯಾವುದೇ ಪರವಾನಿಗೆ ಪಡೆದುಕೊಳ್ಳದೆ ಅನಧೀಕೃತವಾಗಿ ಮದ್ಯಸಾರವನ್ನು ಮಾರಾಟ ಮಾಡುತ್ತಿದ್ದಾಗ ‍ಶ್ರೀ ಶಿವಕುಮಾರ ಪಿ.ಎಸ್‌.ಐ ಯಲಬುರ್ಗಾರವರು ಹೋಗಿ ದಾಳಿ ಮಾಡಿ ಒಟ್ಟು 1765.2/- ರೂಗಳ ಬೆಲೆಯುಳ್ಳ ಮದ್ಯ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ಇಸ್ಪೇಟ್‌ ಜೂಜಾಟ ದಾಳಿ.

ದಿನಾಂಕ: 05-04-2022 ರಂದು ಕೊಪ್ಪಳ ಗ್ರಾಮೀಣ ಪೊಲೀಸ್‌ ಠಾಣಾ ವ್ಯಾಪ್ತಿಯ ಯತ್ನಟ್ಟಿ ಗ್ರಾಮದ ಆಂಜಿನೇಯ್ಯ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ 10-15 ಜನ ಆರೋಪಿತರು ದುಂಡಾಗಿ ಕುಳಿತು ಅಂದರ-ಬಾಹರ ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ವಿಶ್ವನಾಥ ಹಿರೇಗೌಡರ ಸಿ.ಪಿ.ಐ ಕೊಪ್ಪಳ ಗ್ರಾಮೀಣ ವೃತ್ತರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತರಿಂದ ನಗದು ಹಣ, 11,011=00 ರೂ ಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ದಿನಾಂಕ 05-04-2022 ರಂದು ಮುನಿರಾಬಾದ ಪೊಲೀಸ್‌ ಠಾಣಾ ವ್ಯಾಪ್ತಿಯ ಕಂಪಸಾಗರ ಗ್ರಾಮದ ಮಲ್ಲಿಕಾರ್ಜುನ ಮಠದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸುಮಾರು 5 ಜನರು ಅಂದರ್ ಬಾಹರ್ ಎಂಬ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಸುಪ್ರೀತ್ ವಿ ಪಿಎಸ್.ಐ (ಕಾ,ಸು ಮತ್ತು ಸಂಚಾರ) ರವರು  ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ಮಾಡಿ ನಗದು ಹಣ 2230=00  ರೂ ಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ದಿನಾಂಕ 05-04-2022 ರಂದು ಮುನಿರಾಬಾದ ಪೊಲೀಸ್‌ ಠಾಣಾ ವ್ಯಾಪ್ತಿಯ ಶಹಪುರ ಗ್ರಾಮದ ಸಿಹಿ ನೀರಿನ ಹಳ್ಳದ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ 5 ಜನ ಆರೋಪಿತರು  ಅಂದರ್ ಬಾಹರ್ ಎಂಬ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಸುಪ್ರೀತ್ ವಿ ಪಿಎಸ್.ಐ (ಕಾ,ಸು ಮತ್ತು ಸಂಚಾರ) ರವರು  ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ಮಾಡಿ ನಗದು ಹಣ 2800=00  ರೂ ಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 06-04-2022 12:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಪ್ಪಳ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080