Feedback / Suggestions

:: ಪತ್ರಿಕಾ ಪ್ರಕಟಣೆ ::

ಬೇವೂರ ಕರ್ನಾಟಕ ಗ್ರಾಮೀಣ ಬ್ಯಾಂಕ ಕಳ್ಳತನ ಮಾಡಿದ ಕಳ್ಳರ ಬಂಧನ

 

          ಈ ಮೂಲಕ ಪತ್ರಿಕಾ ಪ್ರಕಟಣೆ ನೀಡುವುದೇನೆಂದರೆ, ಯಲಬುರ್ಗಾ ಪೊಲೀಸ್ ವೃತ್ತ ವ್ಯಾಪ್ತಿಯಲ್ಲಿ ಬೇವೂರ ಪೊಲೀಸ್ ಠಾಣಾ ವ್ಯಾಪ್ತಿಯ ಬೇವೂರ ಗ್ರಾಮದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ ನೇದ್ದನ್ನು ದಿನಾಂಕ. 23-09-2020 ರಂದು ಸಾಯಾಂಕಾಲ 06-00 ಗಂಟೆಯಿಂದ ದಿನಾಂಕ. 24-09-2020 ರಂದು ಬೆಳಿಗ್ಗೆ 07-00 ಗಂಟೆಯ ಮದ್ಯದ ಅವದಿಯಲ್ಲಿ ಯಾರೋ ಕಳ್ಳರು ಬ್ಯಾಂಕ ಬಾಗಿಲುಗೆ ಹಾಕಿದ ಬೀಗ್ ಮುರಿದು ಒಳಗಿನ ಎಲ್ಲಾ ಸಿಸಿ ಕ್ಯಾಮರಾಗಳನ್ನು ಹೊಡೆದು, ಸೈರನ್ ವೈಯರ್ ಕಟ್ ಮಾಡಿ ಸದರಿ ಬ್ಯಾಂಕಿನ ಸ್ಟ್ರಾಂಗ್ ರೂಮಿನಲ್ಲಿರುವ ಲಾಕರನ್ನು ಗ್ಯಾಸ ಕಟರನಿಂದ ಕಟ್ ಮಾಡಿ ಅದರಲ್ಲಿದ್ದ ಸುಮಾರು 3,761 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 21,75,572=00 ರೂ. ನಗದು ಹಣವನ್ನು ಹೀಗೆ ಒಟ್ಟು 1,46,55,905=00 ರೂ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಫಿರ್ಯಾದಿ ಬ್ಯಾಂಕ ಮ್ಯಾನೇಜರ ರವಿ ರವರು ದಿನಾಂಕ. 24-09-2020 ರಂದು ಸಾಯಾಂಕಾಲ ನೀಡಿದ ದೂರಿನ ಮೇಲೆ ಬೇವೂರ ಪೊಲೀಸ್ ಠಾಣಾ ಗುನ್ನೆ ನಂ. 78/2020 ಕಲಂ: 457, 380 ಐ.ಪಿ.ಸಿ ನೇದ್ದರಲ್ಲಿ ಪ್ರಕರಣಗಳು ದಾಖಲಾಗಿದ್ದು ಇರುತ್ತದೆ.

 ಸದರಿ ಪ್ರಕರಣದಲ್ಲಿ ಆರೋಪಿ ಹಾಗೂ ಕಳ್ಳತನವಾದ ಮಾಲಿನ ಪತ್ತೆ ಕುರಿತು ನನ್ನ ಹಾಗೂ ಶ್ರೀ ಆರ್.ಎಸ್. ಉಜ್ಜನಕೊಪ್ಪ ಡಿ.ಎಸ್.ಪಿ. ಗಂಗಾವತಿ ಪ್ರಭಾರ ಕೊಪ್ಪಳ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಎಂ. ನಾಗರೆಡ್ಡಿ, ಸಿ.ಪಿ.ಐ ಯಲಬುರ್ಗಾ ವೃತ್ತ ರವರ ನೇತೃತ್ವದಲ್ಲಿ, ಶ್ರೀ ಶಿವರಾಜ ಇಂಗಳೆ, ಪಿ.ಐ, ಡಿ.ಸಿ.ಆರ್.ಬಿ ಘಟಕ ಕೊಪ್ಪಳ, ಶ್ರೀ ವೆಂಕಟೇಶ ಎನ್. ಪಿ,ಎಸ್.ಐ, ಕುಕನೂರ, ಶ್ರೀ ಅಮರೇಶ ಹುಬ್ಬಳ್ಳಿ, ಪಿ.ಎಸ್.ಐ, ಡಿ.ಸಿ.ಐ.ಬಿ ಘಟಕ ಕೊಪ್ಪಳ ಹಾಗೂ ಸಿಬ್ಬಂದಿಯವರಾದ ಶ್ರೀ ವೆಂಕಟೇಶ ಸಿ.ಹೆಚ್.ಸಿ-64, ಶ್ರೀ ವೆಂಕಟೇಶ ಹೆಚ್.ಸಿ-74, ಶ್ರೀ ಸಣ್ಣವೀರಣ್ಣ, ಹೆಚ್.ಸಿ-73, ಶ್ರೀ ಅಶೋಕ ಹೆಚ್.ಸಿ-04, ಶ್ರೀ ತಾರಾಸಿಂಗ್ ಪಿ.ಸಿ-151, ಶ್ರೀ ದೇವೇಂದ್ರಪ್ಪ ಪಿ.ಸಿ-120, ಶ್ರೀ ರವಿ ರಾಠೋಡ್ ಪಿ.ಸಿ-509, ಶ್ರೀ ವಿಶ್ವನಾಥ ಪಿ.ಸಿ-457, ಶ್ರೀ ಶರಣಪ್ಪ ಎ.ಪಿ.ಸಿ-25, ಶ್ರೀ ಮಹಾಂತ‍ಗೌಡ ಪಿ.ಸಿ-392, ಶ್ರೀ ರವಿಶಂಕರ ಪಿ.ಸಿ-133 ಹಾಗೂ ತಾಂತ್ರಿಕ ವಿಭಾಗದವರಾದ ಶ್ರೀ ಪ್ರಸಾದ ಎ.ಪಿ.ಸಿ-166, ಶ್ರೀ ಕೊಟೇಶ ರವರ ಸಿಬ್ಬಂದಿಯನ್ನೊಳಗೊಂಡಂತೆ ಮೂರು ತಂಡಗಳನ್ನು ರಚಿಸಿ ಆರೋಪಿತರ ಪತ್ತೆ ಕುರಿತು ಕಳುಹಿಸಿಕೊಟ್ಟಿದ್ದು ಇರುತ್ತದೆ.

 ಸದರಿ ಪ್ರಕರಣದಲ್ಲಿ ಆರೋಪಿತರ ಯಾವುದೇ ಸುಳಿವು ಇರದ ಕಾರಣ ಪ್ರಕರಣವನ್ನು ಬೇಧಿಸುವುದು ಇಲಾಖೆಗೆ ಒಂದು ಸವಾಲಾಗಿದ್ದು ಪ್ರಕರಣವನ್ನು ಸದರಿ ತಂಡದವರು ವೈಜ್ಞಾನಿಕವಾಗಿ ತನಿಖೆಯನ್ನು ಕೈಗೊಂಡು ಸುಮಾರು ಐದು ದಿನಗಳ ಕಾಲ ಮಹಾರಾಷ್ಟ್ರ ರಾಜ್ಯದಲ್ಲಿದ್ದು ಸದರಿ ಆರೋಪಿತರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಆರೋಪಿತರ ಖಚಿತ ಸುಳಿವಿನ ಮೇಲೆ ಇಂದು ದಿನಾಂಕ. 07-10-2020 ರಂದು ಬೆಳಿಗ್ಗೆ 06-00 ಗಂಟೆ ಸುಮಾರಿಗೆ ಜಳಕಿ ಚೆಕ್ ಪೊಸ್ಟ ಹತ್ತಿರ

 

ಆರೋಪಿತರಾದ 1)ಪ್ರಶಾಂತ @ ಗೋಟು ದಾದಾ ತಂದೆ ರಂಜಿತ ಮೋರೆ ವಯಾ:30 ವರ್ಷ, ಜಾ:ಮರಾಠ ಉ:ಒಕ್ಕಲುತನ ಸಾ:ಭಾವಿ ತಾ:ಮಾಡಾ ಜಿ:ಸೋಲ್ಲಾಪೂರ ಮಹಾರಾಷ್ಟ್ರ ಹಾಗೂ 2)ಹರಿದಾಸ @ ಹರ್ಶರಾಜ @ ನಾನು ತಂದೆ ಸುಬ್ಬರಾವ್ ಟೋಂಬ್ರೆ ವಯಾ:35 ವರ್ಷ ಜಾ:ಧನಗರ ಉ:ಒಕ್ಕಲುತನ ಸಾ:ಆಕಲೋಜ ತಾ:ಮಾಸಿರಸ ಜಿ:ಸೋಲ್ಲಾಪೂರ (ಮಹಾರಾಷ್ಟ್ರ) ರವರನ್ನು ಕಾರಗಳ ಸಮೇತ ತಾಭಾಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ವಿಚಾರಣೆ ಮಾಡಿದ್ದು ಸದರಿ ಆರೋಪಿತರು ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡು ನಮ್ಮನ್ನು ಸೇರಿದಂತೆ ಮಹಾರಾಷ್ಟ್ರದ 04 ಜನ ಹಾಗೂ ಉತ್ತರ ಪ್ರದೇಶದ 06 ಜನರನ್ನು ಸೇರಿಸಿ ಸದರಿ ಪ್ರಕರಣದ ಪ್ರಮುಖ ಆರೋಪಿಯಾದ ಸಂತೋಷ ತಂದೆ ಹರಿ ಕದಂ ಈತನು ಎಲ್ಲರನ್ನು ಆರೋಪಿತರ ಕಾರುಗಳಲ್ಲಿ ಕರೆದುಕೊಂಡು ಬಂದು ಕೃತ್ಯ ಎಸಗುವ ಸ್ಥಳಕ್ಕೆ ಬಿಟ್ಟಿದ್ದು ನಂತರ ಎಲ್ಲರೂ ಕೂಡಿ ಕಳ್ಳತನ ಮಾಡಿದ ಬಂಗಾರ ಮತ್ತು ನಗದು ಹಣವನ್ನು ಹಂಚಿಕೊಂಡಿದ್ದು ಇರುತ್ತದೆ.

 ಸದರಿ ಆರೋಪಿತರಿದ ಈ ಮೇಲಿನ ಕಳ್ಳತನ ಪ್ರಕರಣದಲ್ಲಿ ಒಟ್ಟು 370  ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಅಂ.ಕಿ-13,16,000=00 ರೂ. ಹಾಗೂ ನಗದು ಹಣ  65,000/- ರೂ. ಗಳು ಹೀಗೆ ಒಟ್ಟು 13,81,000=00 ರೂ.ಬೆಲೆ ಬಾಳುವ ಬಂಗಾರದ ಆಭರಣಗಳನ್ನು ಹಾಗೂ ನಗದು ಹಣವನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಒಂದು ಸ್ಕಾರ್ಪೀಯೋ ಹಾಗೂ ಒಂದು ಮಾರುತಿ ಸ್ವಿಪ್ಟ್ ಕಾರುಗಳನ್ನು ಹಾಗೂ ಮೂರು ಮೋಬೈಲ್ ಪೋನಗಳನ್ನು ವಶಪಡಿಸಿಕೊಳ್ಳಲಾಗಿದೆ.

        ಸದರಿ ಪ್ರಕರಣವು ಕ್ಲಿಷ್ಟಕರವಾದ ಪ್ರಕರಣವಾಗಿದ್ದು ಸದರಿ ತನಿಖಾ ತಂಡದವರು ಪ್ರಕರಣ ದಾಖಲಾಗಿ ಕೇವಲ 13 ದಿನಗಳಲ್ಲಿ ಭೇದಿಸಿದ ಈ ಮೇಲ್ಕಂಡ ಎಲ್ಲಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ಸಾಧನೆಯನ್ನು ಶ್ಲಾಘಿಸಿ ಸೂಕ್ತ ಬಹುಮಾನ ಘೋಸಿಸಲಾಗಿದೆ.

                                                                                                                                               ಜಿ. ಸಂಗೀತಾ, ಐ.ಪಿ.ಎಸ್.

                                                                                                                                          ಜಿಲ್ಲಾ ಪೊಲೀಸ್ ಅಧೀಕ್ಷಕರು, ಕೊಪ್ಪಳ.

Last Updated: 08-10-2020 06:39 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Koppal District Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080