Feedback / Suggestions

ಮಟಕಾ ಜೂಜಾಟ ದಾಳಿ.

ದಿನಾಂಕ:28-01-2021 ರಂದು ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರಟಗಿ ಪಟ್ಟಣದ ರಾಮನಗರದ ಕಮಾನ್ ಹತ್ತಿರ  ಸಾರ್ವಜನಿಕರ ಸ್ಥಳದಲ್ಲಿ ಆರೋಪಿತರಾದ ಆಂಜನಯ ತಂದೆ ನಾರಾಯಣ ದಂಡು ಸಾ: ಶಿವನಗರ ಕಾರಟಗಿ ಹಾಗೂ ಮಲ್ಲಪ್ಪ ತಂದೆ ಸಣ್ಣ ನಾಗಪ್ಪ ತಾವರಗೇರಾ ಸಾ: ಕಾರಟಗಿ ಇವರು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ  ಆರ್.ಎಸ್. ಉಜ್ಜನಕೊಪ್ಪ, ಡಿ.ಎಸ್.ಪಿ ಸಾಹೇಬರು ಗಂಗಾವತಿ ರವರು ಮಾಹಿತಿ ಪಡೆದು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತರಿಂದ 3 ಮಟ್ಕಾ ನಂಬರ್ ಗಳನ್ನು ಬರೆದ ಪಟ್ಟಿಗಳು, ಒಂದು ಬಾಲ್ ಪೆನ್ನು ಮತ್ತು ಮಟ್ಕಾ ಜೂಜಾಟದ ಸಲುವಾಗಿ ಸಾರ್ವಜನಿಕರಿಂದ ಸಂಗ್ರಹಿಸಿದ್ದ ಒಟ್ಟು ರೂ.11,920=00 ಗಳು ಹಾಗೂ ಒಂದು ಮೋಬೈಲ್ ನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ದಿನಾಂಕ: 28-01-2021 ರಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಶರಣಬಸವೇಶ್ವರ ಕ್ಯಾಂಪಿನಲ್ಲಿ ಜುಮ್ಮಾ ಮಸೀದಿ  ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ರಾಜೇಸಾಬ ತಂದೆ ಮೀರಾಸಾಬ ಕಮಲಾಪೂರ ವಯಾ- 43 ವರ್ಷ ಜಾ- ಮುಸ್ಲಿಂ ಉ- ಕೂಲಿ ಕೆಲಸ ಸಾ :ಶರಣಬಸವೇಶ್ವರ ಕ್ಯಾಂಪ್ ಗಂಗಾವತಿ ಇವನು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ದೊಡ್ಡಪ್ಪ.ಜೆ. ಪಿ.ಎಸ್.ಐ.. ಗಂಗಾವತಿ ಗ್ರಾಮೀಣ ಠಾಣೆ ರವರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಮಟಕಾ ಜೂಜಾಟದ ನಗದು ಹಣ ರೂ. 1,550-00 ಗಳು, ಒಂದು ಮಟಕಾ ಪಟ್ಟಿ, ಮತ್ತು ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.  

Last Updated: 29-01-2021 10:42 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Koppal District Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080