ಅಭಿಪ್ರಾಯ / ಸಲಹೆಗಳು

ಮಾಹಿತಿ ಹಕ್ಕು ಕಾಯ್ದೆ

ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿ

ಈ ಕಾಯ್ದೆಯು ಜಮ್ಮು-ಕಾಶ್ಮಿರ ಹೊರತು ಪಡಿಸಿ ಭಾರತದ ಎಲ್ಲಾ ಬಾಗಗಳಿಗೆ ಆನ್ವಯಿಸುತ್ತದೆ. ಸಂವಿಧಾನದ ವ್ಯಾಪ್ತಿಗೊಳಪಡುವ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಸೇರಿದಂತೆ ಪಾರ್ಲಿಮೆಂಟ ಹಾಗೂ ರಾಜ್ಯ ಶಾಸಕಾಂಗ ಸೇರಿದಂತೆ ಸಂಸ್ಥೆ, ವ್ಯಕ್ತಿ, ಸಂಘ ಇನ್ನತರೆ ಅರೆ ಸರಕಾರಿ ಸಂಸ್ಥೆಗಳು ಸರಕಾರದ ಹಣದಿಂದ ನಡೆಯುತ್ತಿದ್ದರೆ ಅಂಥವುಗಳು ಕೂಡಾ ಈ ಕಾಯ್ದೆಯ ವ್ಯಾಪ್ತಿ ಗೊಳಪಡುತ್ತವೆ.

ನಾಗರೀಕರ ಸಶಕ್ತಿಕರಣ ?

ಈ ಕಾಯ್ದೆಯು ಭಾರತದ ನಾಗರೀಕರಿಗೆ ಮಾಹಿತಿ ಪಡೆಯುವ ಪರಮಾಧೀಕಾರವನ್ನು ನೀಡುತ್ತದೆ. ಅಂದರೆ ಕಛೇರಿಯಲ್ಲಿ ನಿರ್ವಹಿಸಲಾಗುವ ವಸ್ತುಗಳು, ರೆಕಾರ್ಡಗಳು, ಡಾಕ್ಯುಮೆಂಟ, ಮೆಮೋ, ಇ-ಮೇಲ್, ಅಭಿಪ್ರಾಯಗಳು, ಉಪದೇಶಗಳು, ಮಾಧ್ಯಮಗಳಿಗೆ ನೀಡಿದ ಹೇಳಿಕೆಗಳು, ಸುತ್ತೋಲೆಗಳು, ಆದೇಶಗಳು, ಒಪ್ಪಂದಗಳು, ವರದಿಗಳು, ಪೇಪರಗಳು ಇತ್ಯಾದಿಗಳ ಮಾಹಿತಿ ಕೇಳುವ / ಪಡೆಯುವ ಅವಕಾಶವನ್ನು ಹೊಂದಲು ಅಧಿಕಾರ ನೀಡಲಾಗಿದೆ. ಪ್ರಮುಖವಾಗಿ.

 1. ನಿರ್ವಹಿಸಲಾದ ದಾಖಲೆಗಳ ಪ್ರತಿ ಪಡೆಯುವುದು.
 2. ದಾಖಲೆಗಳ, ಕೆಲಸದ ಮತ್ತು ರೆಕಾರ್ಡಗಳ ಬಗ್ಗೆ ಮಾಹಿತಿ ಪಡೆಯುವುದು.
 3. ಕಾಮಗಾರಿ/ಕೆಲಸದ ಬಗಗೆ ಮಾಹಿತಿ ಪಡೆಯುವುದು.
 4. ಮಾಹಿತಿಯನ್ನು ಪ್ರಿಂಟಔಟ, ಡಿಸ್ಕ್, ಫ್ಲಾಪಿ, ಟೇಪ್, ವೀಡಿಯೋ ಕ್ಯಾಸೇಟ್ ಅಥವಾ ಯಾವುದೇ ಎಲೇಕ್ಟ್ರಾನಿಕ ಮೋಡ ಮುಖಾಂತರ ಪಡೆಯುವದು.

ಮಾಹಿತಿ ನೀಡಬೇಕಾದ ಸಾರ್ವಜನಿಕ ಪ್ರಾಧಿಕಾರ ರಚನೆ

 • ಪ್ರಥಮ ಹಂತ : ಸಾರ್ವಜನಿಕ ಪ್ರಾಧಿಕಾರವು ಮೊದಲನೆ ಒಬ್ಬ “ಸಾರ್ವಜನಿಕ ಮಾಹಿತಿ ಅಧಿಕಾರಿ” (ಪಿ.ಐ.ಓ) ಯನ್ನು ಅರ್ಜಿಗಳ ಸ್ವೀಕಾರಕ್ಕಾಗಿ ನಿಯುಕ್ತಿಗೊಳಿಸುವುದು (ಸೇಕ್ಷನ್ 5)
 • ದ್ವೀತಿಯ ಹಂತ : ಸಾರ್ವಜನಿಕ ಪ್ರಾಧಿಕಾರವು ಕಛೇರಿಯ ಹಿರಿಯ ಅಧಿಕಾರಿಯೊಬ್ಬರನ್ನು ಮಾಹಿತಿ ನೀಡಬೆಕಾದ ಪ್ರಕರಣಗಳ ಉಸ್ತುವಾರಿ ಮಾಡಲು ನಿಯುಕ್ತಿ ಗೊಳಿಸಬೇಕು (Departmental Appellate Authority) ಸೆಕ್ಷನ್ 19(1)
 • ತೃತೀಯ ಹಂತ : ಪಿ.ಐ.ಓ ಅಥವಾ ಡಿ.ಎ.ಎ. ಹಂತದಲ್ಲಿ ಸರಿಯಾದ ಮಾಹಿತಿಯನ್ನು ನೀಡಲಾಗಿಲ್ಲವೆಂಬ ನಾಗರೀಕರ ಅಸಮ್ಮತಿಯನ್ನು ವಿಚಾರಿಸಲು ಕೇಂದ್ರ / ರಾಜ್ಯದ ಮಾಹಿತಿ ಕಮೀಷನರಗಳ ನಿಯುಕ್ತಿ ಮಾಡುವುದು ಸೆಕ್ಷನ್ 12, 13, 15, 16, 18 ಮತ್ತು 19(3)
 • ಸಾರ್ವಜನಿಕ ಪ್ರಾಧಿಕಾರದಿಂದ ನಿಯುಕ್ತಿಗೊಳಿಸಲ್ಪಟ್ಟ ಸಾರ್ವಜನಿ ಮಾಹಿತಿ ಅಧಿಕಾರಿ ಮತ್ತು ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳು 100 ದಿನ ಗೊಳಗಾಗಿ ಈ ಕಾಯ್ದೆಯನ್ನು ಅನುಷ್ಠಾನ ಗೊಳಿಸುವಂತೆ ಹೊಣೆಗಾರಿಕೆ ನೀಡುವುದು ಸೆಕ್ಷನ್ 5(1) ಮತ್ತ 5(2)
 • ಸಾರ್ವಜನಿಕರಿಗೆ ಮಾಹಿತಿ ಒದಗಿಸುವಲ್ಲಿ ಪಿ.ಐ.ಓ. ಮತ್ತು ಎ.ಪಿ.ಐ.ಓ ರವರಷ್ಠೆ ಅಲ್ಲದೇ ಅಪೀಲು ಪ್ರಾಧಿಕಾರಿ ಕೂಡಾ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದು.

ಸಾರ್ವಜನಿಕರಿಗೆ ಉತ್ತರಿಸಬೇಕಾದ ಅವಧಿ

 1. ಪಿ.ಐ.ಓ ರವರು ಮಾಹಿತಿಗೆ ಸಂಬಂಧಿಸಿದ ಅರ್ಜಿ ಸ್ವೀಕೃತವಾದ 30 ದಿನದೊಳಗೆ ಉತ್ತರಿಸಬೇಕು.
 2. ಅದೇ ರೀತಿ ಎ.ಪಿ.ಐ.ಒ ರವರು ಅರ್ಜಿ ಸ್ವೀಕರಿಸಿದ 35 ದಿನದೊಳಗಾಗಿ ಉತ್ತರಿಸಬೇಕು.
 3. ಪಿ.ಐ.ಓ. ರವರು ಮಾಹಿತಿಯನ್ನು ಬೇರೆ ಪ್ರಾಧಿಕಾರಕ್ಕೆ ವರ್ಗಾಯಿಸಿದಲ್ಲಿ ಅವರು ಸ್ವೀಕರಿಸಿದ 30 ದೊಳಗೆ ಉತ್ತರಿಸಬೇಕು.
 4. ಒಂದು ವೇಳೆ ಕೇಳಲಾದ ಮಾಹಿತಿಯು ಭದ್ರತಾ ಪಡೆಗಳಲ್ಲಿ ಲಂಚಕ್ಕೆ ಅಥವಾ ಮಾನವ ಹಕ್ಕು ಉಲ್ಲಂಘನೆಗೆ ಸಂಬಂದಿಸಿದ್ದುದಾದಲ್ಲಿ ಕೇಂದ್ರಿಯ ಮಾಹಿತಿ ಕಮೀಷನರರವರ ಪೂರ್ವಾನುಮತಿ ಪಡೆದು 45 ದಿನದೊಳಗೆ ಪೂರೈಸುವುದು.
 5. ಆದಾಗ್ಯೂ ವ್ಯಕ್ತಿಯ ಅಮೂಲ್ಯವಾದ ಜೀವ ಅಥವಾ ಅವನ ಸ್ವಾತಂತ್ರ್ಯಕ್ಕೆ ಧಕ್ಕೆ ಒದಗುವ ಸನ್ನಿವೇಶದಲ್ಲಿ ಪಿ.ಐ.ಒ ರವರು 48 ಗಂಟೆಯೊಳಗಾಗಿ ಉತ್ತರ ನೀಡುವುದು.
 6. ಪಿ.ಐ.ಓ ರವರು ನಿಗದಿತ ಅವಧಿಯಲ್ಲಿ ಉತ್ತರ ನೀಡಬೇಕಾದಾಗ ಮಾಹಿತಿ ಕೇಳಿದವರಿಂದ ಪೂರ್ತಿ ಫೀಜು ಅಥವಾ ಭಾಗಶಃ ಫೀಜು ಭರಿಸಲು ಅವಧಿಯನ್ನು ವಿಸ್ತರಿಸಬಹುದಾಗಿದೆ.
 7. ಒಂದು ವೇಳೆ ಉತ್ತರವನ್ನು ನಿಗಧಿತ ಅವಧಿಯಲ್ಲಿ ಉತ್ತರಿಸದಿದ್ದಲ್ಲಿ ಅಂಥಹ ಮಾಹಿತಿಯನ್ನು ತಿರಸ್ಕರಿಸಲಾಗಿದೆ ಎಂದು ಪರಿಗಣಿತವಾಗುತ್ತದೆ.

ಕೊಪ್ಪಳ ಜಿಲ್ಲೆಯ ಪಿ.ಐ.ಓ.ಗಳ ಸಂಪರ್ಕ ವಿವರಗಳು

ಕಛೇರಿ / ಠಾಣೆಯ ಹೆಸರು  

ಪಿ.ಐ.ಓ / ಎ.ಪಿ.ಐ.ಒ ರವರ ಹೆಸರು  

ಕಛೇರಿ ವಿಳಾಸ

ಜಿಲ್ಲಾ ಪೊಲೀಸ್ ಕಛೇರಿ  

ಮಲ್ಲಿನಾಥ ಎ.ಎ.ಓ.  

ಜಿಲ್ಲಾ ಪೊಲೀಸ್ ಅಧೀಕ್ಷಕರವರ ಕಛೇರಿ ಅಶೋಕ ವೃತ್ತದ ಹತ್ತಿರ ಕೊಪ್ಪಳ 583231

ಕೊಪ್ಪಳ ಉಪವಿಭಾಗ  

ವೆಂಕಟಪ್ಪ ನಾಯಕ

ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ಉಪಾಧೀಕ್ಷಕರವರ ಕಛೇರಿ ಅಶೋಕ ವೃತ್ತದ ಹತ್ತಿರ ಕೊಪ್ಪಳ. 583231

ಗಂಗಾವತಿ ಉಪವಿಭಾಗ

ಆರ್.ಎಸ್. ಉಜ್ಜನಕೊಪ್ಪ

ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ಉಪಾಧೀಕ್ಷಕರವರ ಕಛೇರಿ ಸರಕಾರಿ ಆಸ್ಪತ್ರೆ ಹತ್ತಿರ ಗಂಗಾವತಿ 583227.

ಕೊಪ್ಪಳ ಗ್ರಾಮೀಣ ವೃತ್ತ

ವಿಶ್ವನಾಥ ಹಿರೇಗೌಡರ  

ವೃತ್ತ ನಿರೀಕ್ಷಕರು, ಕೊಪ್ಪಳ ಗ್ರಾಮೀಣ ವೃತ್ತ ಕಛೇರಿ ಹಸನ್ ರಸ್ತೆ ಕೊಪ್ಪಳ 583231

ಯಲಬುರ್ಗಾ ವೃತ್ತ  

ಎಂ. ನಾಗರೇಡ್ಡಿ  

ವೃತ್ತ ನಿರೀಕ್ಷಕರು, ಯಲಬುರ್ಗಾ ವೃತ್ತ ಕಛೇರಿ ಕಿತ್ತೂರ ಚೆನ್ನಮ್ಮ ವೃತ್ತ ಯಲಬುರ್ಗಾ 583236

ಗಂಗಾವತಿ ಗ್ರಾಮೀಣ ವೃತ್ತ  

ಉದಯ ರವಿ

ವೃತ್ತ ನಿರೀಕ್ಷಕರು, ಗಂಗಾವತಿ ಗ್ರಾಮೀಣ ವೃತ್ತ ಕಛೇರಿ ಸರಕಾರಿ ಆಸ್ಪತ್ರೆ ಹತ್ತಿರ ಗಂಗಾವತಿ  583227

ಕುಷ್ಟಗಿ ವೃತ್ತ  

ನಿಂಗಪ್ಪ ಹೆಚ್.

ವೃತ್ತ ನಿರೀಕ್ಷಕರು ಕುಷ್ಟಗಿ ವೃತ್ತ ಕಛೇರಿ ಕುಷ್ಟಗಿ 584121

ಕೊಪ್ಪಳ ನಗರ ಪೊಲೀಸ್ ಠಾಣೆ

ಮಾರುತಿ ಗುಳ್ಳಾರಿ

ಪೊಲೀಸ್ ನಿರೀಕ್ಷಕರು, ಕೊಪ್ಪಳ ನಗರ ಪೊಲೀಸ್ ಠಾಣೆ ಹಸನ್ ರಸ್ತೆ ಕೊಪ್ಪಳ 583231.

ಗಂಗಾವತಿ ನಗರ ಠಾಣೆ

ವೆಂಕಟಸ್ವಾಮಿ  

ಪೊಲೀಸ್ ನಿರೀಕ್ಷಕರು, ಗಂಗಾವತಿ ನಗರ ಪೊಲೀಸ್ ಠಾಣೆ ಸರಕಾರಿ ಅಸ್ಪತ್ರೆ ಹತ್ತಿರ ಗಂಗಾವತಿ 583227

ಮಹಿಳಾ ಪೊಲೀಸ್ ಠಾಣೆ

ಶ್ರೀ. ಮೌನೇಶ್ವರ

ಪೊಲೀಸ್ ಉಪ ನಿರೀಕ್ಷಕರು ಮಹಿಳಾ ಪೊಲೀಸ್ ಠಾಣೆ ಹಸನ್ ರಸ್ತೆ ಕೊಪ್ಪಳ 583231

ಸಿ.ಇ.ಎನ್. ಪೊಲೀಸ್ ಠಾಣೆ

ಚಂದ್ರಶೇಖರ

ಪೊಲೀಸ್ ನಿರೀಕ್ಷಕರು ಸೈಬರ ಅಪರಾಧ / ಆರ್ಥಿಕ ಅಪರಾಧ ಮತ್ತು ಮಾದಕದ್ರವ್ಯ ಅಪರಾದ ಠಾಣೆ ಜಿಲ್ಲಾ ಪೊಲೀಸ್ ಕಛೇರಿ.  ಕೊಪ್ಪಳ 583231

ಕೊಪ್ಪಳ ಸಂಚಾರ ಠಾಣೆ  

ವೆಂಕಟೇಶ  

ಪೊಲೀಸ್ ಉಪನಿರೀಕ್ಷಕರು ಸಂಚಾರ ಪೊಲೀಸ್ ಠಾಣೆ ತಹಸೀಲ್ ಕಾರ್ಯಾಲಯದ ಹತ್ತಿರ ಕೊಪ್ಪಳ 583231

ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ  

ನಾಗರಾಜ ಎಂ.  

ಪೊಲೀಸ್ ಉಪನಿರೀಕ್ಷಕರು ಕೊಪ್ಪಳ ಗ್ರಾಮೀಣ ಠಾಣೆ ಹಸನ್ ರಸ್ತೆ ಕೊಪ್ಪಳ 583231.

ಮುನಿರಾಬಾದ ಠಾಣೆ 

ಸುಪ್ರಿತ ವಿ.

ಪೊಲೀಸ್ ಉಪನಿರೀಕ್ಷಕರು ಮುನಿರಾಬಾದ ಪೊಲೀಸ್ ಠಾಣೆ ಬಸ್ ಸ್ಟ್ಯಾಂಡ್ ಹತ್ತಿರ ಮುನಿರಾಬಾದ 583233

ಅಳವಂಡಿ ಪೊಲೀಸ್ ಠಾಣೆ

ಚಂದ್ರಪ್ಪ

ಪೊಲೀಸ್ ಉಪನಿರೀಕ್ಷಕರು ಅಳವಂಡಿ ಪೊಲೀಸ್ ಠಾಣೆ ಅಳವಂಡಿ 583226

ಯಲಬುರ್ಗಾ ಪೊಲೀಸ್ ಠಾಣೆ

ಹನುಮಂತ ಹೆಚ್.

ಪೊಲೀಸ್ ಉಪನಿರೀಕ್ಷಕರು ಯಲಬುರ್ಗಾ ಪೊಲೀಸ್ ಠಾಣೆ ಕಿತ್ತೂರ ಚೆನ್ನಮ ವೃತ್ತದ ಹತ್ತಿರ ಯಲಬುರ್ಗಾ 583236

ಕುಕನೂರ ಪೊಲೀಸ್ ಠಾಣೆ

ವೆಂಕಟೇಶ

ಪೊಲೀಸ್ ಉಪನಿರೀಕ್ಷಕರು ಕುಕನೂರ ಪೊಲೀಸ್ ಠಾಣೆ ಕುಕನೂರ 583232

ಬೇವೂರ ಠಾಣೆ  

ಶೀಲಾ ಎಂ.

ಪೊಲೀಸ್ ಉಪನಿರೀಕ್ಷಕರು ಬೇವೂರ ಪೊಲೀಸ್ ಠಾಣೆ ಬೇವೂರ 583237

ಗಂಗಾವತಿ ಸಂಚಾರಿ ಠಾಣೆ.

ಪುಂಡಪ್ಪ

ಪೊಲೀಸ್ ಉಪನಿರೀಕ್ಷಕರು ಗಂಗಾವತಿ ಸಂಚಾರ ಠಾಣೆ ಸರಕಾರಿ ಆಸ್ಪತ್ರೆ ಹತ್ತಿರ ಗಂಗಾವತಿ. 583227.

ಗಂಗಾವತಿ ಗ್ರಾಮೀಣ ಠಾಣೆ

ದೊಡ್ಡಪ್ಪ ಜಿ

ಪೊಲೀಸ್ ಉಪನಿರೀಕ್ಷಕರು ಗಂಗವಾತಿ ಗ್ರಾಮೀಣ ಠಾಣೆ ಸರಕಾರಿ ಆಸ್ಪತ್ರೆ ಹತ್ತಿರ ಗಂಗಾವತಿ 583227.

ಕಾರಟಗಿ ಪೊಲೀಸ್ ಠಾಣೆ  

ಅಗ್ನಿ ಎಲ್.

ಪೊಲೀಸ್ ಉಪನಿರೀಕ್ಷಕರು ಕಾರಟಗಿ ಪೊಲೀಸ್ ಠಾಣೆ ಕಾರಟಗಿ 583229.  

ಕನಕಗಕರಿ ಪೊಲೀಸ್ ಠಾಣೆ  

ಸುರೇಶ ಡಿ.

ಪೊಲೀಸ್ ಉಪನಿರೀಕ್ಷಕರು ಕನಕಗಿರಿ ಪೊಲೀಸ್ ಠಾಣೆ ನವಲಿ ಕ್ರಾಸ್ ಕನಕಗಿರಿ 584119.  

ಕುಷ್ಟಗಿ ಪೊಲೀಸ್ ಠಾಣೆ  

ತಿಮ್ಮಣ್ಣ

ಪೊಲೀಸ್ ಉಪನಿರೀಕ್ಷಕರು ಕುಷ್ಟಗಿ ಪೊಲೀಸ್ ಠಾಣೆ ಕುಷ್ಟಗಿ 584121.

ತಾವರಗೇರಾ ಪೊಲೀಸ್ ಠಾಣೆ 

ಕು. ಗೀತಾಂಜಲಿ

ಪೊಲೀಸ್ ಉಪನಿರೀಕ್ಷಕರು ತಾವರಗೇರಾ ಪೊಲೀಸ್ ಠಾಣೆ ತಾವರಗೇರಾ 584131.

ಹನುಮಸಾಗರ ಪೊಲೀಸ್ ಠಾಣೆ

ಅಶೋಕ

ಪೊಲೀಸ್ ಉಪನಿರೀಕ್ಷಕರು ಹನುಮಸಾಗರ ಪೊಲೀಸ್ ಠಾಣೆ ಹನುಮಸಾಗರ 584114.

 

ಇತ್ತೀಚಿನ ನವೀಕರಣ​ : 18-02-2021 12:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಪ್ಪಳ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080