ಅಭಿಪ್ರಾಯ / ಸಲಹೆಗಳು

ನಾಗರೀಕರ ಹಕ್ಕುಗಳು

ನಾಗರಿಕರ ಹಕ್ಕುಗಳು

ನಾಗರಿಕರ ಹಕ್ಕುಗಳನ್ನು ಕಾನೂನಿನಲ್ಲಿ ಕ್ರೋಢಿಕರಿ ಈ ಕೆಳಗಿನಂತೆ ಸೇರಿಸಲಾಗಿದೆ.

 

15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ಮಹಿಳೆಯರು ಠಾಣೆಗೆ ಹೋಗಲು ನಿರಾಕರಿಸಬಹುದು ಮತ್ತು ಅವರ ಮನೆಯಲ್ಲಿಯೆ ಸಂದರ್ಶನ ನಡೆಸಲು ಸೂಚಿಸಬಹುದು.

  • ಸಂಜ್ಞೆಯ ಅಪರಾಧದ ಸಮಯದಲ್ಲಿ ಸಾಮಾನ್ಯವಾಗಿ ಬಂಧನ ವಾರಂಟ್ ಇಲ್ಲದೆ ಬಂಧಿಸಬಹುದು.
  • ಬಂಧಿಸುವ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ತನ್ನ ಗುರುತನ್ನು ಸ್ಪಷ್ಟವಾಗಿ ಪ್ರದರ್ಶಿಸಿಬೇಕು.
  • ವಾರೆಂಟ್ ಜಾರಿಯಾದ ನಂತರ ಬಂಧಿಸುವ ಸಮಯದಲ್ಲಿ ಪೊಲೀಸರು ಒತ್ತಾಯ ಮಾಡಬಹುದು. ಆದರೆ ಬಂಧಿಸಿದ ವ್ಯಕ್ತಿ ಘನತೆಯನ್ನು ಕಾಪಾಡಬೇಕು. ಬಂಧಿಸಿದ ವ್ಯಕ್ತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಅಥವಾ ಪರೇಡ ಮಾಡಬಾರದು.
  • ಬಂಧಿಸುವಕ್ಕಿಂತ ಮುಂಚೆ ಪೊಲೀಸ್ ಅಧಿಕಾರಿಯು ಬಂಧನದ ಜ್ಞಾಪನವನ್ನು ತಯಾರಿಸಿರಬೇಕು, ಅದು ಸ್ಥಳದಲ್ಲಿ ಲಭ್ಯವಿರುವ ಸಾಕ್ಷಿಯಿಂದ ದೃಢೀಕರಿಸಿರಬೇಕು. ಮುಖ್ಯವಾಗಿ ಬಂಧಿಸಿದ ವ್ಯಕ್ತಿಗೆ ತನ್ನ ಸಂಬಂದಿಕ ಮತ್ತು ನ್ಯಾಯಾವಾದಿಯೊಂದಿಗೆ ಸಂಪರ್ಕಿಸಲು ಅನುವು ಮಾಡಬೇಕು.
  • ಮಕ್ಕಳು ಮತ್ತು ಬಾಲಾಪರಾಧಿಗಳನ್ನು ಬಂಧನಕ್ಕೆ ತೆಗೆದುಕೊಳ್ಳುವಾಗ ಯಾವುದೇ ಬಲವಂತವಾಗದಂತೆ ವಿಶೇಷ ಗಮನ ಹರಿಸಬೇಕು. ಇಂತಹ ಸಂದರ್ಭಗಳಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಜವಾಬ್ದಾರಿಯುತ ಸ್ಥಳಿಯ ನಾಗರಿಕರ ಸಹಾಯ ಪಡೆದು ಕನಿಷ್ಠ ಒತ್ತಾಯ ಮಾಡಬೇಕು.
  • ಬಂಧಿತರನ್ನು 24 ಗಂಟೆಯೊಳಗಾಗಿ ನ್ಯಾಯಾಧೀಶರ ಮುಂದೆ ಹಾಜರ ಪಡಿಸಬೇಕು. ಅಪರಾಧಿಯ ವಿಚಾರಣೆಯನ್ನು ಆರೋಪಿಯ ಹಕ್ಕುಗಳನ್ನು ಗಮನದಲ್ಲಿಟ್ಟುಕೊಂಡು ನಡೆಸಬೇಕು.
  • ಮಾನ್ಯ ನ್ಯಾಯಾಲಯವು ಬಂಧಿತ ವ್ಯಕ್ತಿಯನ್ನು ಪೊಲೀಸ್ ಬಂಧನಕ್ಕೆ ನೀಡುವ ಸಮಯದಲ್ಲಿ ಸರ್ಕಾರಿ ವೈದ್ಯರಿಂದ ಪರೀಕ್ಷಿಸಿ ವೈದ್ಯಕೀಯ ಪ್ರಮಾಣಪತ್ರವನ್ನು ಪಡೆದು ಒಪ್ಪಿಸುತ್ತದೆ. ಬಂಧಿತನಿಂದ ಜಪ್ತಿಮಾಡಿಕೊಂಡ ವಸ್ತುಗಳನ್ನು ಮಾನ್ಯ ನ್ಯಾಯಾಲಯದಲ್ಲಿ ಹಾಜರ ಪಡಿಸಲಾಗುತ್ತದೆ. ಆ ವ್ಯಕ್ತಿಯು ತನ್ನ ಜಪ್ತಿ ಮಾಡಿದ ವಸ್ತುಗಳನ್ನು ಮಾನ್ಯ ನ್ಯಾಯಾಲಯದ ಆದೇಶದನ್ವಯ ಮರಳಿ ಪಡೆಯಬಹುದು.

ಇತ್ತೀಚಿನ ನವೀಕರಣ​ : 30-09-2020 05:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಪ್ಪಳ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080