ಅಭಿಪ್ರಾಯ / ಸಲಹೆಗಳು

ನಿಮ್ಮ ಪ್ರಶ್ನೆಗಳು

FAQs (ನಿಮ್ಮ ಪ್ರಶ್ನೆ)

ತುರ್ತು ಸಂದರ್ಭದಲ್ಲಿ ನಾನು ಏನು ಮಾಡಬಹುದು ?

  • ಜಿಲ್ಲೆಯ ಪೊಲೀಸ್ ನಿಯಂತ್ರಣಾ ಕೊಠಡಿಯನ್ನು 100/1012 ಕ್ಕೆ ಕರೆ ಮಾಡುವ ಮೂಲಕ ಪೊಲೀಸರಿಗೆ ತಿಳಿಸಿ.
  • ಹತ್ತಿರದ ಪೊಲೀಸ್ ಠಾಣೆಗೆ ಕರೆ ಮಾಡಿ (ಸಂಪರ್ಕಿಸಿ ಪುಟದಲ್ಲಿ ನೀಡಲಾದ ಸಂಖ್ಯೆಗಳನ್ನು).
  • ಸಂಬಂಧಪಟ್ಟ ಅಧಿಕಾರಿಯನ್ನು ಕರೆ ಮಾಡಿ (ನಮ್ಮ ಅಧಿಕಾರಿಗಳ ಪುಟದಲ್ಲಿ ನೀಡಲಾದ ಸಂಖ್ಯೆಗಳನ್ನು).

 ಅಪರಾಧ ಅಥವಾ ಅಪಘಾತದ ಬಗ್ಗೆ ನಾನು ಹೇಗೆ ಮಾಹಿತಿಯನ್ನು ನೀಡಬಹುದು ?

  • ಜಿಲ್ಲೆಯ ಪೊಲೀಸ್ ನಿಯಂತ್ರಣಾ ಕೊಠಡಿಯನ್ನು 100 ಕ್ಕೆ ಕರೆ ಮಾಡುವ ಮೂಲಕ ಪೊಲೀಸರಿಗೆ ತಿಳಿಸಿ.
  • ಹತ್ತಿರದ ಪೊಲೀಸ್ ಠಾಣೆಗೆ ಕರೆ ಮಾಡಿ (ಸಂಪರ್ಕಿಸಿ ಪುಟದಲ್ಲಿ ನೀಡಲಾದ ಸಂಖ್ಯೆಗಳನ್ನು).
  • ಸಂಬಂಧಪಟ್ಟ ಅಧಿಕಾರಿಯನ್ನು ಕರೆ ಮಾಡಿ (ನಮ್ಮ ಅಧಿಕಾರಿಗಳ ಪುಟದಲ್ಲಿ ನೀಡಲಾದ ಸಂಖ್ಯೆಗಳನ್ನು).
  • ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಠಾಣಾಧೀಕಾರಿಗಳಿಗೆ ಮಾಹಿತಿ ತಿಳಿಸಿರಿ  

ಅಪಘಾತದ ಸಂದರ್ಭದಲ್ಲಿ ನಾನು ಏನು ಮಾಡಬೇಕು?

  • ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಬೇಕು.
  • 108 ಸಂಖ್ಯೆಗೆ ಕರೆಮಾಡಿ ಆ್ಯಂಬುಲೆನ್ಸ್ ನ್ನು ಕರೆಸುವುದು ಅಥವಾ ಗಾಯಾಳುವನ್ನು ಹತ್ತಿರದ ಆಸ್ಪತ್ರೆಗೆ ಯಾವುದೇ ವಾಹನದಲ್ಲಿ ಕರೆದುಕೊಂಡು ಹೋಗಿ ತುರ್ತು ವೈದ್ಯಕೀಯ ಸಹಾಯವನ್ನು ಒದಗಿಸಲು ಪ್ರಯತ್ನಿಸುವುದು.  ಗಾಯಾಳವನ್ನು ಸಹಾಯ ಮಾಡುವುದರಿಂದ ನಿಮಗೆ ಯಾವುದೇ ಅಪಘಾತ ಪ್ರಕರಣದಲ್ಲಿ ಸೇರಿಸುವುದಿಲ್ಲ.
  • ಪೊಲೀಸರಿಗೆ ತಿಳಿಸಿರಿ (ಮೇಲೆ ವಿವರಿಸಿದಂತೆ).
  • ಆರೋಪಿಗಳ ಹೆಸರು (ಹೆಸರು, ಫೋನ್ ಸಂಖ್ಯೆ, ವಿಳಾಸ, ಫೋಟೋ, ವಿವರಣೆ) ಮತ್ತು ಆರೋಪಿತನ ವಾಹನ (ನೋಂದಣಿ ಸಂಖ್ಯೆ, ವಾಹನದ ಮಾದರಿ, ಬಣ್ಣ, ಬಂದ ದಿಕ್ಕು) ಇತ್ಯಾದಿಯನ್ನು ಪೊಲೀಸರಿಗೆ ತಿಳಿಸಿ.
  • ಆರೋಪಿತನ ಮೇಲೆ ಸಾರ್ವಜನಿಕರಿಂದ ದಾಳಿ ಯಾಗದಂತೆ ಅಥವಾ ಆರೋಪಿತನ ವಾಹನಕ್ಕೆ  ಬೆಂಕಿ ಹಚ್ಚದಂತೆ ನೋಡಿಕೊಳ್ಳಿ.
  • ಸುತ್ತಲೂ ನಿಲ್ಲಬೇಡಿ ಅನಾವಶ್ಯಕವಾಗಿ ರಸ್ತೆಯ ಮೇಲೆ ಜನಸಂದಣಿಯನ್ನು ಸೇರಿಸಿದಂತಾಗುತ್ತದೆ. 

ತೊಂದರೆಯಲ್ಲಿರುವ ಮಗುವಿಗೆ ನಾನು ಹೇಗೆ ಸಹಾಯ ಮಾಡಬಹುದು?

  • 100 ಕ್ಕೆ ಕರೆ ಮಾಡಿ
  • ಉಚಿತ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಕ್ಕೆ ಕರೆ ಮಾಡಿ.
  • ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಿ.

ತೊಂದರೆಯಲ್ಲಿರುವ ಮಹಿಳೆಗೆ ನಾನು ಹೇಗೆ ಸಹಾಯ ಮಾಡಬಹುದು?

  • 100 ಕ್ಕೆ ಕರೆ ಮಾಡಿ
  • ಉಚಿತ ವನಿತಾ ಸಹಾಯವಾಣಿ ಸಂಖ್ಯೆ 1091 ಕ್ಕೆ ಕರೆ ಮಾಡಿ. 
  • ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಿ.

ನಾನು ದೂರು ದಾಖಲಿಸುವುದು ಹೇಗೆ?

  • ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ.
  • ಎಲ್ಲಾ ಸಂಬಂಧಿತ ವಿವರಗಳೊಂದಿಗೆ SHO (ಸ್ಟೇಷನ್ ಹೌಸ್ ಆಫೀಸರ್) ಗೆ ದೂರನ್ನು ಬರೆದುಕೊಡುವುದು. ಅಥವಾ SHO ಗೆ ಮೌಖಿಕವಾಗಿ ತಿಳಿಸಿ, ಅವರು ನಿಮ್ಮ ದೂರಿನ ವಿಷಯನ್ನು ಬರೆದು ನಿಮಗೆ ಓದಿ ಹೇಳುವರು. 
  • ದೂರಿಗೆ ಸಹಿ ಮಾಡಿ.
  • ದೂರು ಭಾರತೀಯ ದಂಡ ಸಂಹಿತೆ ಪ್ರಕಾರ ಸಂಜ್ಞೇಯ ಅಪರಾಧ ವಾಗಿದ್ದಲ್ಲಿ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಲಾಗುವುದು ಮತ್ತು  SHO ರವರು ಉಚಿತವಾಗಿ ಅದರ ಪ್ರತಿಯನ್ನು ನಿಮಗೆ ನೀಡುವರು.
  • ದೂರು ಅಸಂಜ್ಞೇಯ ಅಪರಾಧ ಎಂದು ಕಂಡು ಬಂದಲ್ಲಿ ಎಸ್.ಹೆಚ್.ಓ. ರವರು ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಪ್ರಥಮ ವರ್ತಮಾನ ವರದಿ ದಾಖಲಿಸುತ್ತಾರೆ. ನಿಮ್ಮ ದೂರಿಗೆ SHO ರವರು ಫಾರ್ಮ್ 76A ದಲ್ಲಿ ಸ್ವೀಕೃತಿಯನ್ನು ನೀಡುತ್ತಾರೆ. 

ಕಳೆದುಹೋದ ದಾಖಲೆಗಳು / ಮೊಬೈಲ್ ಫೋನ್ ಕುರಿತು ನಾನು ಹೇಗೆ ಸ್ವೀಕೃತಿ ಪಡೆಯಬಹುದು  ?

  • ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ.
  • ಮೇಲೆ ವಿವರಿಸಿದಂತೆ ದೂರು ಸಲ್ಲಿಸುವುದು. ಅದೇ ರೀತಿ ಸ್ವೀಕೃತಿ ನೀಡಲಾಗುವುದು.

ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು (PCC) ನಾನು ಹೇಗೆ ಪಡೆಯಬಹುದು?

  • ಜಿಲ್ಲಾ ಪೊಲೀಸ್ ಕಛೇರಿಗೆ ಭೇಟಿ ನೀಡಿ ನಿಗದಿತ ನಮೂನೆಯಲ್ಲಿ ಅಗತ್ಯ ಮಾಹಿತಿ ಭರ್ತಿ ಮಾಡಿ ಕಳೆದ ಒಂದು ವರ್ಷದಿಂದ ವಾಸಿಸುತ್ತಿರುವ ಸ್ಥಳದ ವಿಳಾಸದ ದಾಖಲೆ, ಗುರುತಿನ ದಾಖಲೆ ಮತ್ತು ಜನ್ಮ ದಿನಾಂಕದ ದಾಖಲೆ ಜೊತೆಗೆ 3 ಪಾಸಪೋರ್ಟ ಫೋಟೋಗಳೊಂದಿಗೆ ಸಲ್ಲಿಸಬೇಕು.  ಅರ್ಜಿಯೊಂದಿಗೆ  ಬ್ಯಾಂಕ ಚಾಲನ್ ಭರ್ತಿ ಮಾಡಿದ ರಸೀದಿಯನ್ನು ಲಗತ್ತಿಸಬೇಕು. 
  • ಸ್ಥಳಿಯ ಪೊಲೀಸರಿಂದ ನಿಮ್ಮ ಪೂರ್ವಪರದ ವಿಚಾರಣೆ ಪ್ರಕ್ರಿಯೆ ನಡೆಸಲಾಗುತ್ತದೆ. 
  • ಸ್ಥಳಿಯ ಪೊಲೀಸರಿಂದ 21 ಕೆಲಸದ ದಿನಗಳ ಅವಧಿಯಲ್ಲಿ ಪಿ.ಸಿ.ಸಿ.ಯನ್ನು ಪಡೆದುಕೊಂಡು ನೀಡಲಾಗುವುದು (ಸ್ಥಳೀಯ ವಿಚಾರಣೆಯನ್ನು ನಿಗದಿತ ಸಮಯದಲ್ಲಿ ಮಾಡಲಾಗುವುದು). 
  • ಸಂಘ ಸಂಸ್ಥೆಗೆಳು ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳನ್ನು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಸಲ್ಲಿಸಬಹುದು.

ಪಾಸ್  ಪೋರ್ಟ್ ಪರಿಶೀಲನೆ ಹೇಗೆ ಮಾಡಲಾಗುತ್ತದೆ?

  • ನೀವು ಪ್ರಾದೇಶಿಕ ರಹದಾರಿ ಕಛೇರಿ ಅಥವಾ ಪಾಸ್ ಪೋರ್ಟ ಸೇವಾ ಕೇಂದ್ರದಲ್ಲಿ ಸಲ್ಲಿಸಿದ ಅರ್ಜಿಯನ್ನು ಜಿಲ್ಲಾ ಪೊಲೀಸ್ ಕಛೇರಿಗೆ ಪರಿಶೀಲನೆ ಕುರಿತು ಕಳುಹಿಸಲಾಗುತ್ತದೆ.
  • ಕೂಡಲೇ ನಿಮ್ಮ ಅರ್ಜಿಯನ್ನು ಸಂಬಂಧಿಸಿದ ಪೊಲೀಸ್ ಠಾಣೆಗೆ ಪೂರ್ವ ಚರಿತ್ರೆ ಪರಿಶೀಲನೆಗೆ ಕಳುಹಿಸಲಾಗುತ್ತದೆ.  
  • ಸ್ಥಳೀಯ ಅಧಿಕಾರಿಗಳು ನಿಮ್ಮ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. 
  • ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಸ್ಥಳೀಯ ಪೊಲೀಸರ ವರದಿ ಸ್ವೀಕೃತವಾದ ನಂತರ ಪ್ರಾದೇಶಿಕ ರಹದಾರಿ ಕಛೇರಿಗೆ ಮುಂದಿನ ಕ್ರಮ ಕುರಿತು ಕಳುಹಿಸಿಕೊಡಲಾಗುವುದು. 
  • ಪೋಲಿಸ್ ವಿಚಾರಣೆಯು 21 ದಿನಗಳ ಅವಧಿಯಲ್ಲಿ ಮಾಡಲಾಗುತ್ತದೆ. ಸ್ಥಳೀಯ ವಿಚಾರಣೆಯು ಸಹ ನಿರ್ಧಿಷ್ಠ ಸಮಯದಲ್ಲಿ ಮಾಡಲಾಗುತ್ತದೆ. 
  • ಪೊಲೀಸ್ ವಿಚಾರಣೆ ಸಮಯದಲ್ಲಿ ನೀವು ಯಾವುದೇ ಹಣವನ್ನು ನೀಡಬೇಕಾಗಿಲ್ಲಾ. ಯಾರಾದರೂ ಪೊಲೀಸರು ಹಣ ಕೇಳಿದರೆ  ಹತ್ತಿರದ ಪೊಲೀಸ್ ಠಾಣೆಗೆ ದೂರನ್ನು ನೀಡಿ ಅಥವಾ ಸಂಬಂಧಪಟ್ಟ ಅಧಿಕಾರಿಗಳನ್ನು ಫೋನ್ ಮೂಲಕ ಸಂಪರ್ಕಿಸಿ.

ನಾನು ಚಾಲನೆ ಮಾಡುವಾಗ ಯಾವ ದಾಖಲೆಗಳನ್ನು ಇಟ್ಟು ಕೊಳ್ಳ ಬೇಕು?

  • ನಿಮ್ಮ ಡ್ರೈವಿಂಗ್ ಲೈಸೆನ್ಸ್, ನೋಂದಣಿ ಪ್ರಮಾಣಪತ್ರ, ವಿಮೆ ಪ್ರಮಾಣಪತ್ರ, ಹೊಗೆ ಹೊರಸೊಸುವಿಕೆ ಪ್ರಮಾಣ ಪತ್ರ ಮತ್ತು ತೆರಿಗೆ ಪ್ರಮಾಣಪತ್ರದ ಮೂಲ ದಾಖಲೆ ಕಡ್ಡಾಯವಾಗಿ ಇಟ್ಟುಕೊಳ್ಳಬೇಕು.  ಸರಕು ವಾಹನಗಳಿಗೆ ವಾಹನದ ಗುಣಮಟ್ಟ ಪ್ರಮಾಣ ಪತ್ರ ಮತ್ತು ಪರವಾನಿಗೆಯನ್ನು ಸಹ ಇಟ್ಟುಕೊಳ್ಳಬೇಕು.

ಸಂಚಾರ ನಿಯಮ ಉಲ್ಲಂಘನೆಗಳಿಗಾಗಿ ಸ್ಥಳದಲ್ಲಿ  ದಂಡವನ್ನು ಸಂಗ್ರಹಿಸುವ ಅಧಿಕಾರ ಯಾರು ಹೊಂದಿದ್ದಾರೆ?

  • ಪಿ.ಎಸ್.ಐ. (2 ನಕ್ಷತ್ರ ) ಶ್ರೇಣಿಯ ಯಾವುದೇ ಪೊಲೀಸ್ ಅಧಿಕಾರಿ ಅಥವಾ ಅದಕ್ಕಿಂತ ಉನ್ನತ ಅಧಿಕಾರಿ ದಂಡ ವನ್ನು ವಿಧಿಸಬಹುದು. 
  • ಅಲ್ಲದೆ ಸಂಚಾರ ಠಾಣೆಯ ಸಹಾಯಕ ಸಬ್-ಇನ್ಸ್ ಪೆಕ್ಟರ್ (ಎ.ಎಸ್.ಐ ಒಂದು ನಕ್ಷತ್ರ, ಬಿಳಿ ಅಂಗಿ) ಮತ್ತು  ಹೈವೇ ಪೆಟ್ರೋಲ್ ವಾಹನಗಳಿಗೆ ನಿಯೋಜಿಸಲಾದ ಎ.ಎಸ್.ಐ.ಗಳಿಗೂ ಸಹ ದಂಡವನ್ನು  ವಿಧಿಸುವ ಅಧಿಕಾರ ನೀಡಲಾಗಿದೆ.
  • ದಂಡ ವಿಧಿಸಲು ಯಾವುದೇ ಪೋಲೀಸ್ ಕಾನ್ಸಟೇಬಲ್ ಅಥವಾ ಹೆಡ್ ಕಾನ್ಸಟೇಬಲ್ ಅಧಿಕಾರ ಹೊಂದಿಲ್ಲ.
  • ದಂಡವನ್ನು ಭರಿಸಿದ್ದಕ್ಕೆ ಲಿಖಿತವಾಗಿ ಅಥವಾ ಮುದ್ರಿತ (ಬ್ಲಾಕ ಬೇರಿ ಉಪಕರಣ ವಿದ್ದಲ್ಲಿ) ರಸೀದಿ ನೀಡಲಾಗುವುದು. 
  • ರಶೀದಿ ನೀಡಲು ನಿರಾಕರಿಸಿದಲ್ಲಿ, ಹತ್ತಿರದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರಿ ಅಥವಾ ಫೋನ್ ಮೂಲಕ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ.

ಸಂಚಾರ ನಿಯಮ ಉಲ್ಲಂಘನೆಗೆ ನಾನು ದಂಡ ಪಾವತಿಸಲು ನಿರಾಕರಿಸಿದಲ್ಲಿ ಏನಾಗುತ್ತದೆ ?

  • ನಿಮಗೆ ಮುಂದಿನ ಕೆಲಸದ ದಿನದಲ್ಲಿ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗಲು ನೋಟೀಸ್ ನೀಡಲಾಗುವುದು.
  • ನ್ಯಾಯಾಲಯದಲ್ಲಿ ಕಠಿಣ ದಂಡವನ್ನು ವಿಧಿಸಬಹುದು.
  • ನೀವು ನ್ಯಾಯಾಲಯಕ್ಕೆ ಹಾಜರಾಗದಿದ್ದಲ್ಲಿ, ನಿಮ್ಮ ವಿರುದ್ದ ವಾರಂಟ್ ಜಾರಿ ಮಾಡಿ ನಿಮ್ಮನ್ನು ಬಂಧಿಸಬಹುದು ಮತ್ತು ಹೆಚ್ಚಿನ ದಂಡವನ್ನು ವಿಧಿಸಬಹುದು.

ನನ್ನ ಸ್ವಯಂ ಸೇವೆಗಳನ್ನು  ಕೊಪ್ಪಳ ಜಿಲ್ಲಾ ಪೊಲೀಸಗೆ  ಹೇಗೆ ಸಲ್ಲಿಸಬಹುದು ?

  • ನಿಮ್ಮ ಸಮೀಪದ ಪೊಲೀಸ್ ಠಾಣೆಗೆ ಭೇಟಿ ನೀಡಿ ಬೀಟ ಕಮೀಟಿ ಸದಸ್ಯರಾಗಿ ನೊಂದಾಹಿಸಿಕೊಳ್ಳುವುದರ ಮೂಲಕ ನಿಮ್ಮ ಅಮೂಲ್ಯ ಸಹಕಾರವನ್ನು ಸ್ಥಳೀಯ ಪೋಲಿಸರಿಗೆ ನೀಡಬಹುದು. ನೀವು ನಿಮ್ಮ ಪ್ರದೇಶದ ಬೀಟ್ ಕಾನ್ಸಟೇಬಲನೊಂದಿಗೆ ಸಂಪರ್ಕ ಹೊಂದಿ ಅವಶ್ಯಕ ಸಮಯದಲ್ಲಿ ಸಹಾಯವನ್ನು ಮಾಡಬಹುದು.

ಇತ್ತೀಚಿನ ನವೀಕರಣ​ : 21-10-2020 11:55 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಪ್ಪಳ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080