ಅಭಿಪ್ರಾಯ / ಸಲಹೆಗಳು

ಕಾನೂನು ಮತ್ತು ಸುವ್ಯವಸ್ಥೆ

(ಕಾನೂನು ಮತ್ತು ಸವ್ಯೆವಸ್ಥೆ)

ಸಮಾಜದ ಎಲ್ಲಾ ವರ್ಗಗಳು ತಮ್ಮ ನೈಜ ಅಥವಾ ಕಲ್ಪಿತ ಹಕ್ಕುಗಳಿಗಾಗಿ ದ್ವನಿ ಎತ್ತುತ್ತಿರುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು ದಿನದಿಂದ ದಿನಕ್ಕೆ ಮಹತ್ವವನ್ನು ಪಡೆದುಕೊಳ್ಳುತ್ತಿವೆ.  ಇಂತಹ ವಿವಾದಗಳು ತಲೆ ಎತ್ತುವುದರಿಂದ  ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಠಿಯಿಂದ ಪೊಲೀಸ್ ಮಧ್ಯ ಪ್ರವೇಶ ಮಾಡುವುದು ಅವಶ್ಯಕವಾಗುತ್ತದೆ. ಹಕ್ಕು ಮತ್ತು ಕರ್ತವ್ಯ ಒಂದೆ ನಾಣ್ಯದ ಎರಡು ಮುಖಗಳಾಗಿದ್ದು, ಹಕ್ಕುಗಳನ್ನು ಚಲಾಯಿಸುವುದು ತಮ್ಮ ಕರ್ತವ್ಯವನ್ನು ಸಹ ನಿರ್ವಹಿಸಬೇಕು.  ನಮ್ಮ ಕರ್ತವ್ಯವು ಸಮುದಾಯದ ಪ್ರಭಲರಿಗೆ ಹಕ್ಕನ್ನು ಚಲಾಯಿಸಲು ಮತ್ತು ದುರ್ಬಲರಿಗೆ ನಿಯಂತ್ರಿಸುವುದಾಗಿರುವುದಿಲ್ಲ. ನಮ್ಮ ದೇಶದ ಸಂವಿಧಾನದಲ್ಲಿ ನಮಗಾಗಿ ಅನೇಕ ಮೂಲಭೂತ ಹಕ್ಕುಗಳನ್ನು ಪ್ರಜಾಪ್ರಭುತ್ವಕ್ಕೆ ನೀಡಲಾಗಿದ್ದು  ಸಾರ್ವಜನಿಕರ ಹಿತದೃಷ್ಠಿಯಿಂದ ಸಂವಿಧಾನದಲ್ಲಿ ಪಟ್ಟಿ ಮಾಡಿದ ಕೆಲವೊಂದು ನಿಬಂಧನೆಗೊಳಪಟ್ಟು ಈ ಹಕ್ಕುಗಳನ್ನು ಚಲಾಯಿಸಬಹುದಾಗಿದೆ.

ಪೊಲೀಸರು ಸಾರ್ವಜನಿಕರ ಸಹಾಕಾರವಿಲ್ಲದೆ ಕರ್ತವ್ಯ ನಿರ್ವಹಿಸಲು, ಸಾರ್ವಜನಿಕರ ಪ್ರಾಣ, ಆಸ್ತಿ ಮತ್ತು ಹಕ್ಕಿನ ರಕ್ಷಣೆ ಮಾಡಲು ಸಾಧ್ಯವಿಲ್ಲ.  ಜನ ಜೀವನ ನಿರ್ಭಿತವಾಗಿ ಸಾಗುವಂತಾಗಲು ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರ ಅತಿ ಅವಶ್ಯಕ. ನಮ್ಮ ದೇಶದಲ್ಲಿ ಹುಟ್ಟಿದವಾಗಲಿ ಅಥವ ಬೇರೆ ದೇಶದವರಿಂದ ಕಾನೂನ ಉಲ್ಲಂಘನೆಯಾದಲ್ಲಿ ಕಾನೂನು ತನ್ನದೆ ಆದ ಕ್ರಮ ಕೈ ಗೊಳ್ಳುತ್ತದೆ ಮತ್ತು ಯಾರಿಗೂ ಕಾನೂನನ್ನು ಕೈಗೆತ್ತಿಗೊಳ್ಳಲು ಅನುಮತಿ ಇರುವುದಿಲ್ಲ.  

ಮೂಲಭೂತವಾಗಿ ಯಾರೊಬ್ಬರೂ ತಮ್ಮ ಸಮೀಪ ಮತ್ತು ಅಕ್ಕ ಪಕ್ಕದಲ್ಲಿ ಯಾವುದೇ ತೊಂದರೆಯನ್ನು ಬಯಸುವುದಿಲ್ಲ. ಆದಾಗ್ಯೂ ತೊಂದರೆ ಉದ್ಭವಿಸದಲ್ಲಿ ಪ್ರಭುದ್ದ ಸಾರ್ವಜನಿಕರಿಂದ ಎರಡು ವಿಷಯಗಳನ್ನು ಅಪೇಕ್ಷಿಸಬಹುದು, ಒಂದು ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸುವುದು ಮತ್ತು ತಾವೂ ತಮ್ಮ ಮನೆಗಳಲ್ಲೇ ಇದ್ದು ಪೊಲೀಸರಿಗೆ ಪರಿಸ್ಥಿತಿ ನಿಯಂತ್ರಿಸಲು ಸಹಕರಿಸುವುದು.   

ಯಾವುದೇ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ತೊಡಕಾದಲ್ಲಿ ಪೊಲೀಸರ ಮೊದಲ ಆದ್ಯತೆ ಪರಿಸ್ಥಿತಿಯನ್ನು ಕೂಡಲೇ ನಿಯಂತ್ರಿಸಿ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯೆವಸ್ಥೆ ಕಾಪಾಡುವುದಾಗಿರುತ್ತದೆ.

ಸಾರ್ವಜನಿಕರಲ್ಲಿ ಮನವಿ:

  • ಸಾರ್ವಜನಿಕರು ಕಾನೂನು ಸುವ್ಯವಸ್ಥೆಗೆ ತೊಡಕಾಗುವಂತಹ, ಶಾಂತಿಗೆ ಭಂಗತರುವಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಾರದು.
  • ಕಾನೂನಿಗೆ ಗೌರವಿಸಿದರೆ ಅದರ ಪಾಲನೆ ತನ್ನಿಂದ ತಾನಾಗುತ್ತದೆ ಎಂಬುದನ್ನು ಸಾರ್ವಜನಕರು ತಿಳಿದುಕೊಳ್ಳಬೇಕು.
  • ಕೆಲವೊಬ್ಬರು ಅಪರಾಧವನ್ನು ಮಾಡಿ ಅದರಿಂದ ತಪ್ಪಿಸಿಕೊಂಡ ಭ್ರಮೆಯಲ್ಲಿರುತ್ತಾರೆ, ಅದು ತಪ್ಪು ತಡವಾದರೂ ಒಂದಿಲ್ಲ ಒಂದು ದಿನ ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
  • ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿ ತಾನು ಒಬ್ಬ ಸಮವಸ್ತ್ರ ಧರಿಸದ ಪೋಲಿಸ್ ಎಂಬ ಭಾವನೆ ಹೊಂದಿರಬೆಕು. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದರ ಜೊತೆಗೆ ಅಗತ್ಯ ಮಾಹಿತಿಗಳನ್ನು ಸಂಬಂದಿಸಿದ ಸ್ಥಳಿಯ ಪೊಲೀಸರಿಗೆ ನೀಡುವುದು ಮತ್ತು ಪೊಲೀಸರೊಂದಿಗೆ ಸಹಕರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ವಾಗಿರುತ್ತದೆ. ಮಾಹಿತಿ ನೀಡಿದವರ ವಿವರ ವನ್ನು ಗೌಪ್ಯವಾಗಿಡಲಾಗವುದು ಅಪರಾಧಿಗಳನ್ನು ಬಂದಿಸಲು ನೆರವು ನೀಡಲು ಸಾರ್ವಜನಿರಲ್ಲಿ ಕೋರಲಾಗಿದೆ.

ಇತ್ತೀಚಿನ ನವೀಕರಣ​ : 30-09-2020 05:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಪ್ಪಳ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080